Sunday, August 9, 2015

ಕಯ್ಯಾರ ಕಿಞ್ಞಣ್ಣ ರೈಕಾಸರಗೂಡು ಹೋರಾಟ: ಮುಂದೆ ಏನು ?


ಕಿಞ್ಞಣ್ಣ ರೈ ಅವರು ಸಾಕಷ್ಟು ವರ್ಷಗಳ ಕಲ ಕನ್ನಡಕ್ಕಾಗಿ ಹೋರಾಡಿ, ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿ ತಮ್ಮ ಸಾರ್ಥಕ ಜೀವನ ಪ್ರಯಾಣ ಮುಗಿಸಿದ್ದರೆ. ಎಂಬತ್ತನೇ ಇಳಿವಯಸ್ಸಿನಲ್ಲೂ ಕೂಡ, ಕಾಸರಗೂಡು ಮಿಲನಿಕರಣ  ಕ್ರಿಯಾ ಸಮಿತಿ ರಚಿಸಿ, ಮಹಾಜನ್ ವರದಿ ಅನುಷ್ಟಾನಕ್ಕೆ ಹೊರಡಿದ್ದಾರೆ. 

ಆದರೆ "ಬೆಂಕಿ ಬಿದ್ದಿದೆ ನಮ್ಮ ಮನೆಗೆ ...  ಒ ಬೇಗ ಬನ್ನಿ,  ಕನ್ನಡ ಗಡಿ ಕಾಯೋಣ ಬನ್ನಿ, ಕನ್ನಡದ ನುಡಿ ಕಾಯೋಣ ಬನ್ನಿ" ಎಂಬ ಘೋಷಣೆ ಕನ್ನಡಿಗರನ್ನು ಎಬ್ಬಿಸುವಲ್ಲಿ ಸಾಕಷ್ಟು ಸಫಲವಾಗಲಿಲ್ಲ.ಶಾಲಾ ದಿನಗಳಲ್ಲಿ ಅವರ ಬಗ್ಗೆ ಓದಿದಾಗ, ಅವರ ಹೋರಾಟಕ್ಕೆ ನಾವೇಕೆ ಕೈ ಜೋಡಿಸುತ್ತಿಲ್ಲ ಎನಿಸುತ್ತಿತ್ತು. 

ಇಂದು ಕರ್ನಾಟಕದಲ್ಲಿ : ಎಲ್ಲೆಡೆ ಇಂಗ್ಲೀಷ್ ಮಾದ್ಯಮ ಜನಪ್ರಿಯವಾಗುತ್ತಿದೆ, ಕರ್ನಾಟಕದಲ್ಲಿ ಸರ್ಕಾರದ ಎಲ್ಲ ಸೇವೆಗಳು ಇಂಗ್ಲೀಷ್ ನಲ್ಲಿಯೇ ನಡೆಯುತ್ತವೆ, ಕೇರಳದಲ್ಲೂ ಬಹುಶಃ ಇಂಗ್ಲೀಷ್ ಗೊತ್ತಿದ್ದರೆ, ಹೇಗೂ ಜೀವನ ನಡೆಸಬಹುದು ಅನಿಸುತ್ತದೆ. ಹೀಗಾಗಿ ಎರಡು ಕಡೆಯ ಕನ್ನಡಿಗರಿಗೆ ಮಿಲಿನದಿಂದ ಸಾಕಷ್ಟು ಬದಲಾವಣೆಗಳು ಕಾಣದೆ ಹೋರಾಟ ಮಂಕಾಗಿರಬಹುದು. :-(.


ಬಹಳಷ್ಟು ಜನರು ಕನ್ನಡಕ್ಕಾಗಿ ಹೋರಾಟ ಮಾಡಿದರು ಸಹ ಇಂದು ಅವಕ್ಕೆ ಕಾವು ದೊರೆತಿಲ್ಲ.  ಆಷ್ಟೆ ಅಲ್ಲ ಮಹಾರಾಷ್ಟ್ರದಲ್ಲಿಯೂ ಸಹ ಬೆಳಗಾವಿ ಕಾವು ಆರುತ್ತಿದೆ, ಭಾಷೆ ಆಧಾರಿತ ಹೊಸ ರಾಜ್ಯ ಯಾವುದಕ್ಕೂ ಮನ್ನಣೆ ಸಿಗುತ್ತಿಲ್ಲ.

ಎಲ್ಲರಿಗೂ ಜಾಗತಿಕರಣದ ಇಂದಿನ ದಿನಗಳಲ್ಲಿ ಗಡಿಗಳು ಭೂಪಟದ ಮೇಲಿನ ಗೆರೆಗಳಷ್ಟೇ. ನಾವುಗಳು ಗಡಿಗಳನ್ನು ಮೀರಿ ಭಾಷೆಯನ್ನು ಬೆಳೆಸುವ ಅಗತ್ಯವಿದೆ. ಭಾಷೆಯಂದರೆ ಕೇವಲ ಒಂದು ಗಡಿ ರೇಖೆಯೊಳಗೆ ಉಪಯೋಗಿಸುವ ನುಡಿಯಲ್ಲ, ವಿಶ್ವದಾದ್ಯಂತ ಜನಾಂಗವನ್ನು ಜೋಡಿಸುವ ಸಾಧನೆ. ಕಾಸರಗೂಡಿನ ಕನ್ನಡಿಗರ ಸ್ಥಿತಿ ಇಂದು ಪ್ರಪಂಚದ ಬಹಳಷ್ಟು ಕನ್ನಡಿಗರಿಗಿದೆ.  UAE, UK, USA, Australia, Singapore ಅಥವಾ ಭಾರತ ಬೇರೆ ರಾಜ್ಯಗಳಲ್ಲಿ ಗಳಲ್ಲಿ ನೆಲೆಸಿರುವ ಕನ್ನಡಿಗರ ಪಾಡು ಸಹ ಬೇರೆಯದೆನಲ್ಲ.

ಇಂದಿನ ಜಗತ್ತಿನಲ್ಲಿ ಉಳಿಯಬೇಕೆಂದರೆ ಬೆಳೆಯಬೇಕು. ಕನ್ನಡವನ್ನು ಕರ್ನಾಟಕದ ಹೊರಗೂ ಸಹ ಬೆಳೆಸಬೇಕು, ಮುಂದಿನ ಜನಾಂಗಕ್ಕೆ ಕನ್ನಡ ಹಿರಿಮೆ, ಕನ್ನಡಿಗರ ಸಾಧನೆ ಎರಡು ತಿಳಿಸಬೇಕು. ಇವೆಲ್ಲಕ್ಕಿಂತ ಹೆಚ್ಚಾಗಿ ಕನ್ನಡಕ್ಕೆ ದುಡಿಮೆಯ ಶಕ್ತಿ ಕೊಡಬೇಕಿದೆ. ಅದು ಇಂದು ಕನ್ನಡಕ್ಕೆ ಬರಬೇಕೆಂದರೆ - ಜನರಲ್ಲಿ ಇಚ್ಛಾ ಶಕ್ತಿ ಇರಬೇಕು:" ದೇಶದ ಹೊರಗೂ ಕೂಡ".
ಕನ್ನಡಿಗರು ಮುಂದೆ ನಡೆಸಬೇಕಿರುವುದು,ಕೇವಲ ಕಾಸರಗೂಡಿನ ಹೋರಾಟವಲ್ಲ, ಜಗತ್ತಿನೆಲ್ಲೆಡೆ ನಾವು ಜಾಗೃತರಾಗಬೇಕಾಗಿದೆ.

ಇದನ್ನು ನಮ್ಮದೇ ದೇಶದ ಬೇರೆ ಜನರು ಒಳ್ಳೆಯ ಉದಾಹರಣೆ ಕೊಟ್ಟಿದ್ದಾರೆ: ಇಂದು ಕ್ಯಾಲಿಫೋರ್ನಿಯದ ಸಿಲಿಕಾನ್ ಕಣಿವೆಯಲ್ಲಿ - ಹಿಂದಿ, ತಮಿಳು, ತೆಲುಗು ಸಿನೆಮಗಳು ಉತ್ತಮವಾಗಿ ನಡೆಯುತ್ತವೆ. ಶಾಲೆಗಳಲ್ಲಿ - ತಮಿಳು, ತೆಲುಗು, ಹಿಂದಿ ಭಾಷೆಗಳನ್ನು ಒಂದು ವಿಷಯವಾಗಿ ಕಲಿಯಬಹುದು . ಇನ್ನೂ ಕೆಲವು ಕಡೆ ನಗರದಳಿತವು - ಭಾರತ ಕೆಲವು ಭಾಷೆಗಳಲ್ಲಿ ಜನರಿಗೆ ಮಾಹಿತಿ ನೀಡುತ್ತಿವೆ.  ಇಂದು ತಮಿಳು, ಹಿಂದಿಯನ್ನು ಹಲವಾರು ದೇಶಗಳಲ್ಲಿ ಆಡಳಿತ ಭಾಷೆಯ ಸ್ಥಾನವಿದೆ.

ಕನ್ನಡಕ್ಕಾಗಿ ಹೊರಡಲು ಇಂದಿನ ಟೆಕ್ನಾಲಜಿ ಯುಗದಲ್ಲಿ ಹೋರಾಡಲು ಹೆಚ್ಚಿಗೆ ಶ್ರಮ ಬೇಕಿಲ್ಲ.  "ಕನ್ನಡವರನ್ನು, ಕನ್ನಡಿಗರನ್ನು ಬೆಂಬಲಿಸುತ್ತೇವೆ, ಕನ್ನಡಕ್ಕಾಗಿ ಅಗ್ರಹಿಸುತ್ತೇವೆ" ಎನ್ನುವ ಮನೋಭಾವವಿದ್ದರೆ ಸಾಕು, ನಾವುಗಳು ಕನ್ನಡವನ್ನು ಮುಂದಿನ ಶತಮಾನಕ್ಕೆ ಕೊಂಡೊಯ್ಯಬಹುದು.  ಇದೆ ನಾವು ಕಿಞ್ಞಣ್ಣ ರೈ ಅವರಿಗೆ ಕೊಡುವ ಅತಿ ದೊಡ್ಡ ಶ್ರದ್ಧಾಂಜಲಿ ಎನಂತಿರಿ ?






 

 

Wednesday, February 1, 2012

Reply: RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!!

RSS ಕಣ್ಣಲ್ಲಿ ಭಾಷಾನೀತಿ, ಒಕ್ಕೂಟ ಮತ್ತು ಸಮಾಜ!!!

 ಬಳಗದವರ ಮೇಲಿನ ಬ್ಲಾಗ್ ಓದಬೇಕಾದರೆ,  ನನ್ನ ಮನಸ್ಸಿನಲ್ಲಿ ಅನಿಸಿಕೆಗಳನ್ನು ಇಲ್ಲಿ ಬರೆಯುತ್ತಿದ್ದೇನೆ.

ಸಂಘದವರು ಹಾಗೂ ಬಳಗದವರಿಬ್ಬರಿಗೂ ಬೇಕಾಗಿರುವುಧು ಅಭಿವೃಧ್ಧಿ, ನಾಡನ್ನು ವೈಭವಕ್ಕೆ ತೆಗೆದುಕೊಂಡು ಹೋಗುವ ಹಂಬಲ: ಆದರೆ ವ್ಯತ್ಯಾಸ ಇಷ್ಟೇ -

Sangh: India is a country of Hindus who speak different languages, customs.

Banavasi Balaga:  Indian is an Union where Countries speaking different languagues come together.


ಸಂಘದ ಬಗ್ಗೆ ಬರೆಯುವುದಕ್ಕೆ ಅಂತ ಒಂದು ಪುಸ್ತಕವನ್ನು ಓದಿ,  ಎಲ್ಲ ತಿಳಿದುಕೊಂಡಂತೆ ಬರೆಯುವುದು:
"ನೆಲೆದ ಮೇಲೆ ಈಜಿದಂತೆ, Glossery ಓದಿ ಪುಸ್ತಕ ಬಗ್ಗೆ ಮಾತನಾಡಿದಂತೆ "   ಹೇಗೆ ನೀರಿಗೆ ಇಳಿದ ಮೇಲೆಯೇ ಈಜುವುದನ್ನು ತಿಳಿಯಬಹುದೋ ಹಾಗೆಯೇ ಸಂಘದ ಬಗ್ಗೆ  ಕೂಡ ...

ಸಂಘ ಬಗ್ಗೆ  ಈ ವಿಷಯ ನಾವು ತಿಳಿದುಕೊಳ್ಳುವುದು ಮುಖ್ಯ; "ಇಲ್ಲಿ ಯಾವುದೇ ವ್ಯಕ್ತಿ, ಒಬ್ಬನ ಚಿಂತನೆ ಮುಖ್ಯವಲ್ಲ; ಅಲ್ಲಿ ಮುಖ್ಯ ಭಾರತದ ವೈಭವ, ಉದ್ದಾರ ಅಷ್ಟೇ" !!!   ಗುರೂಜಿಯವರ ಕೆಲವು ಆಲೋಚನೆಗಳೂ ದೇಶದ ಹಿತಕ್ಕೆ ಸಹಕಾರಿಯಲ್ಲ ಎಂದರೇ ಸಂಘವು ಅದನ್ನು ಕೂಡ ಕೈ ಬಿಡುತ್ತದೇ.

ಭಾಷೆಗಳ ಬಗ್ಗ:
ಇಂದು ಸಂಘವು ಬಾರಿ ಹಿಂದಿಯನ್ನೇ ನೆಚ್ಚಿಕೊಂಡಿದ್ದಾರೆ ಎಂಬುದು ನಿಜವಾಗಿದ್ದಾರೆ - ಅದು ಭಾರತದ ಎಲ್ಲ ರಾಜ್ಯಗಳಲ್ಲಿ ಇಂದು ಬೆಳೆಯುತ್ತಿರಲಿಲ್ಲ.  ಇಂದು ನಮ್ಮ ಬನವಾಸಿ  ಬಳಗದವರು  ಕನ್ನಡದಲ್ಲಿ ಸೇವೆಯನ್ನು , ಮಾಹಿತಿ ಪಡೆಯುವ ಹಕ್ಕನ್ನು ಎಲ್ಲರಿಗೂ ತಿಳಿಸುತ್ತಿದ್ದಾರೆ. ಈ ಕೆಲಸವನ್ನು ಸಂಘ 50 ವರ್ಷಗಳ ಹಿಂದೆಯೇ ಮಾಡಿದೆ.  ಇಲ್ಲಿ ಯಾವುದೇ ಶಾಖೆ ಹಿಂದಿಯಲ್ಲಿ ನಡೆಯುವುದಿಲ್ಲ - ಕರ್ನಾಟಕದಲ್ಲಿ ಅದು ಕನ್ನಡ.

ಕೇಶವ ಕೃಪಾದಲ್ಲಿ ಉತ್ತರದಿಂದ , ಮಣಿ ಪುರದಿಂದ ಬಂದೆ ಕಾರ್ಯಕರ್ತರೂ ಕನ್ನಡ ಕಲಿತಿದ್ದನ್ನು ನಾನು ಸ್ವತಃ ಬಲ್ಲೆ.  "ಇಂದು ಸಂಘ ಕನ್ನಡಲ್ಲಿ ಪ್ರಕಟಿಸಿರುವಷ್ಟು ಪುಸ್ತಕಗಳನ್ನು ಯಾವ ಕನ್ನಡ ಪರ ಹೋರಾಟಮಾಡುವ ಸಂಸ್ಥೆಯೂ ಪ್ರಕಟಿಸಿಲ್ಲ." ಬೆಂಗಳೂರಿನಲ್ಲಿರುವ ಅನೇಕ ಬೇರೆ ರಾಜ್ಯದ ಸ್ವಯಂ ಸೇವಕರು ಕನ್ನಡ ಕಲಿಯಲು ಪ್ರಯತ್ನಿಸುತ್ತಿರುವದನ್ನು ನಾನು ಕಂಡಿದ್ದೇನೆ.

ಗುರೂಜಿಯವರು ಹಿಂದೂ ರಾಷ್ಟ್ರದ ಐಕ್ಯತೆಯ ದೃಷಿಯಿಂದ: ಆಂಗ್ಲ ಭಾಷೆಗೆ ಬದಲು ಹಿಂದಿ ಬಳಸಬಹುದು ಎಂದಿದ್ದಾರೆ ಅಷ್ಟೇ.  ಅವರ ಆಶಯ ಎಲ್ಲ ಭಾರತೀಯ ಭಾಷೆಗಳು ಬೆಳೆಯಬೇಕೆಂದು. ಆದರೆ ಇಂದು ಕೇಂದ್ರ ಸರಕಾರ ಮಾಡುವ ಹಿಂದಿ ತಾರತಮ್ಯಕ್ಕೆ ಗುರೂಜಿ ಕಾರಣವಲ್ಲ.

ಸಂಸ್ಕೃತ ಭರತದಲ್ಲಿ ಎಲ್ಲರೂ ಬಳಸುತ್ತಿದರು . ಮಹಾನ್ ಗಣಿತಗ್ನನಾಗಿದ್ದ ಕನ್ನಡದ ಭಾಸ್ಕರ ಕೂಡ ಸಂಸ್ಕೃತದಲ್ಲಿ "ಸಿದ್ಧಾಂತ ಶಿರೋಮಣಿ" ರಚಿಸಿದ್ದ. ಕೇರಳದಲ್ಲಿದ್ದ "ಶಂಕರಾಚಾರ್ಯ" ಕಾಶ್ಮೀರದಲ್ಲಿದ್ದ ಪಂಡಿತರನ್ನು ಸಂಸ್ಕೃತದಲ್ಲಿ ವಾದ ಮಾಡಿ ಸೋಲಿಸಿದ್ದ.  ಅದರ ಬಗ್ಗೆ ಅಭಿಮಾನ ವಿರಬೇಕು.  ನಮಗೆ ಕನ್ನಡಕ್ಕೆ ಹೆಚ್ಕು ಪ್ರಾಶ್ಯಸ್ತ ಕೊಡಬೇಕೆಂದರೆ ನಾವು ಕೊಡಬಹುದು. ಅವರ ಒಂದು ವಿಚಾರ ನಮಗೆ ಇಷ್ಟವಾಗಲಿಲ್ಲ ಅಂತ ಬೇರೆ ಎಲ್ಲ ವಿಚಾರಗಳನ್ನು ಪರಿಗಣಿಸದಿರುವುದು ಸರಿಯಲ್ಲ.

ಇಂದು ಸಂಘ್ ಐ‌ಟಿ ಶಾಖೆಗಳ ಮೂಖಾಂತರ "ಕನ್ನಡ ಪರಿಚಯ ವರ್ಗಗಳನ್ನು" ನಡೆಸುತ್ತಿದೆ. ಇದರಲ್ಲಿ ಭಾರತದ ಎಲ್ಲ ಭಾಷೆಯ ಜನರೂ ಕೂಡ ಆಯೋಜಿಸಲೂ ಸಹಾಯಮಾಡುತ್ತಿದ್ದಾರೆ" ; (kpv2012.blogspot.com). ಇದರಲ್ಲಿ ಸಂಘದ ಮಹಾರಾಷ್ಟ್ರ ಮೂಲದ, ಒರಿಸ್ಸ ಮೂಲದ , ಕನ್ನಡ ಬಾರದ ಎಲ್ಲ ಸ್ವಯಂಸೇವಕರೂ ದುಡಿಯುತ್ತಿದ್ದಾರೆ.

ಒಕ್ಕೂಟದ ಬಗ್ಗೆ!
ಇಲ್ಲಿ  ಸಂಘದವರ ಉದ್ದೇಶ ಇಷ್ಟೇ : ಭಾರತ ಧೇಶ ಒಡೆದು - ಮತ್ತೆ ಪರಕೀಯರ ದಾಸ್ಯದಲ್ಲಿರಬಾರದು. ನಮ್ಮಲ್ಲಿ ಒಗ್ಗಟ್ಟಿಲ್ಲದಿದ್ದರಿಂದಲೇ - ತುರ್ಕಿಗಳು , ಪೆರ್ಸಿಯನ್ನಾರು ದಾಳಿ ಮಾಡಿ, ನಮ್ಮ ಸಂಸ್ಕೃತಿಯನ್ನು ನಾಶಮಾಡಿದರು. ಇದರ ಚರಿತ್ರೆಯನ್ನು - ಬೀದರ್, ಗುಲ್ಬರ್ಗಾ , ಬಿಜಾಪುರ್ ಎಲ್ಲ ಕಡೆ ಈಗಲೂ ನೋಡಬಹುದು .

ಸಂಘದಲ್ಲಿ ಎಲ್ಲವೂ ವಿಕೇಂದ್ರಿತ. ಒಂದು ಶಾಖೆ ಹೇಗೆ ನಡೆಸಬೆಂಕೆಂದು - ಅಲ್ಲಿ ಯಾರು ಮೇಲಿನವರು ಹೇಳುವುದಿಲ್ಲ, ಕೇವಲ ಸಲಹೆ ಕೊಡುತ್ತಾರೆ .  ಒಂದೇ ಕೇಂದ್ರಿತ ವ್ಯವಸ್ಥೆ ಇದ್ದರೆ ಸಂಘ ಇಷ್ಟು ದೊಡ್ಡದಾಗಿ ಬೆಳೆಯಲು ಸದ್ಯವಾಗುತ್ತಿರಲಿಲ್ಲ.

ಕಾಶ್ಮೀರವನ್ನು ಭರತದಲ್ಲಿ ಮಿಲೀನಗೊಳಿಸುವಲ್ಲಿ ಸಂಘದ ಪಾತ್ರ ಮಹತ್ವದ್ದು. ಗುರೂಜಿಯವರು, ಹಿಂದೂ ಮಹಾರಾಜ ಹರಿಸಿಂಘ್ ನೊಂದಿಗ ಮಾತನಾಡಿದ್ದರು.  ಸುಮಾರು 1950 - 60 ರಲ್ಲಿ ಪ್ರತ್ಯೇಕತಾವಾದಿಗಳ ಹುಟ್ಟದಗಿಸುವ ನಿಟ್ಟಿನಲ್ಲಿ ಇದನ್ನು ಹೇಳಿದ್ದರು. ಇದರ ಉದ್ದೇಶ ಅಭಿವೃದ್ದಿಗಾಗಿ ತೆಗೆದುಕೊಳ್ಳುವ ಸ್ವತಂತ್ರ ನಿರ್ಣಯಗಳನ್ನು ಕಟ್ಟಿಹಾಕುವುದಲ್ಲ.

 ಸಮಾಜಿಕ ಸಮಸ್ಯೆಯ ಸರಳೀಕರಣ!

ದಲಿತರ ವಿಚಾರದಲ್ಲಿ ಸಂಘಕ್ಕೆ ಭೀಮ್ ರಾವ ಅಂಬೇಡ್ಕರ್ ಅವರಿಗಿಂತ ಬೇರೆ ಸರ್ಟಿಫಿಕೇಟ್ ಬೇಕಾಗಿಲ್ಲ. ಒಮ್ಮೆ "ಸಾಮಾಜಿಕ ಕ್ರಾಂತಿ ಸೂರ್ಯ - ಡಾ! ಅಂಬೇಡ್ಕರ್" ಪುಸ್ತಕ ಓದಿ.

ಗುರೂಜಿಯವರ ಚಿಂತನೆಯಲ್ಲಿ ಸತ್ಯ ಇದೆ:
ಇಂದು ಮಾಯಾವತಿ ದಲಿತರ ಹೆಸರಿನಲ್ಲಿ ಆಡಳಿತ ನಡೆಸುತ್ತಾ ಇದ್ದರೆ ... ಆದರೆ ಉತ್ತರ ಪ್ರದೇಶದ ಉದ್ಧಾರ - ಆ ದೇವರೇ ಬಲ್ಲ. 

ಅತ್ಯಂತ ಮಡಿವಂತ ಸಮಾಜವಾದ "ಮಧ್ವ ಪೀಠದ" ಗುರುಗಳಾದ ವಿಶ್ವೇಶ ತೀರ್ಥರೂ ನಮ್ಮ ಮೇಲೂ ಗುರೂಜಿಯವರ ಪ್ರಭಾವ ಇದೆ, ನಮ್ಮ ಬದಲಾವಣೆಗೆ ಅವರು ಸಹ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಅವರು ದಲಿತರ ಕೆರಿಗೆ ಹೋಗಿದ್ದು.  ಮಡಿವಂತರಾದರೆ ದಳಿತರಿಗೂ ಸಹ ದೀಕ್ಷೆ ಕೊಡುವುದಾಗಿ ಘೋಷಿಸಿದ್ದರು !!!

ಉಡುಪಿಯಲ್ಲಿ ನಡೆನ "ಪ್ರಥಮ ವಿಶ್ವ ಹಿಂದೂ ಸಮ್ಮೇಳನದಲ್ಲಿ ' - "ಅಸ್ಪೃಶ್ಯತೆಗೆ ಧರ್ಮದಲ್ಲಿ ಜಾಗವಿಲ್ಲ" ಎಂದು ಘೋಷಿಸಿದ್ದರು.

ನಮ್ಮ ದ್ರಾವಿಡ ಚಳುವಳಿಯ ನಾಯಕರು ಕೆಳ ವರ್ಗದ ಜನರನ್ನೂ ಸೇರಿಸಿ, ಹಿಂದೂ ಸಂಸ್ಕೃತಿಯನ್ನೇ ಹೀಗೆಳೆದು ಆಡಳಿತ ನಡೆಸುತ್ತಾರೆ .  ಸರಕಾರ ಎಲ್ಲರನ್ನು ಸಮನಾಗಿ ನೋಡುವುದು ಎಂದರೆ ಇದೇನೇ?

ಇಂದು ಮದುವೆ ಎನ್ನುವ ಒಂದು ವಿಚಾರ ಬಿಟ್ಟರೆ ಎಲ್ಲ ವರ್ಣದವರು ಒಟ್ಟಾಗಿ ಇದ್ದರೆ.  ಆದರೂ ಸಹ ಸಮಾಜಘಾತಕ - "ಭಾರತೀಯ ಮೂಲನಿವಾಸಿ ಸಂಘಕ್ಕೆ" ಮಲ್ಲಿಖರ್ಜುನ ಖರ್ಗೆ ಯಂತಹವರು ಸಹಾಯ ನೀಡುತ್ತಾರೆ- ಗುಲ್ಬರ್ಗಾದಲ್ಲಿ ಸಮಾವೇಶ ನಡೆಸಿ ಮುಂದಿನ ಸರ್ತಿ ಸೀಟನ್ನು ಗಟ್ಟಿ ಮಾಡಿ ಕೊಂಡಿದ್ದಾರೆ

ಇಂದು ಮೀಸಲಾಥಿ ಅವಶ್ಯಕತೆಯಿರುವುದು ಎಲ್ಲ ವರ್ಗದ ಬಡವರಿಗೆ. ಕೆಲ ವರ್ಗದ ಶ್ರೀಮಂತರಿಂದ, ಮತಕ್ಕಾಗಿ ರಾಜಕಾರಣಿಗಳಿಂದ  ಅದರ ದುರುಪಯೋಗವಾಗುತ್ತಿದೆ.


ಸಂಘದ ಧರ್ಮದೃಷ್ಟಿ!

 ಹೌದು ಇಲ್ಲಿ ಗುರೂಜಿ ಹೇಳಿರುವುದು ಸತ್ಯ.  ಕೇರಳದಿಂದ ಹಿಡಿದು, ಕಾಶ್ಮೀರದವರೆಗೆ, ಗುಜುರಾತಿನಿಂದ - ಬಂಗಾಳ, ಅಸ್ಸಾಮ್ ವರೆಗೆ ಪಾಕಿಸ್ತಾನಿಗಳು  ನಮ್ಮ ಮುಸಲ್ಮಾನರಿಗೆ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿದ್ದಾರೆ.

ಅವರ ಮೂಲಕವೇ ಕೋಟ ನೋಟು ಚಳವಣೆಯಾಗುತ್ತಿದೆ.   "ಲವ್ ಜೆಹಾದ್" ನಡುಯುತ್ತಿದೆ.  ಕೇರಳದ ಉಗ್ರರು ಪಾಕಿಸ್ತಾನದಲ್ಲಿ ತರಬೇತಿ ಪಡೆಯುತ್ತಿದರೆ. ಕಾಶ್ಮೀರಿ ಮುಸ್ಲಮನರು ಪಾಕಿಸ್ತಾನದೊಂದಿಗೆ ಸೇರಬೇಕು ಅನ್ನುತ್ತಿದರೆ.

ಇಂದು ಚರ್ಚ್ನ ಕುಮ್ಮಕ್ಕಿಂದ ನಾಗಗಳು ಪ್ರತ್ಯಕ ರಾಷ್ಟ್ರಕ್ಕಾಗಿ ಹೋರಾಟ ಮಾಡುತ್ತಿದರೆ.

ಆದರೂ ಸಹ ರಾಷ್ಟ್ರೀಯರೆಂದು ಗುರುತಿಸಿದ್ಕೊಂದ ಮುಸ್ಲಮನರನ್ನು ಒಗ್ಗೂಡಿಸಲು - "ರಾಷ್ಟ್ರೀಯ ಮುಸ್ಲಿಂ ಮುಂಚ್" ಸ್ಥಾಪಿಸಿದೆ.

ವಸ್ತು ಸ್ಥಿತಿಯನ್ನು ಮರೆತು ಮಾತನಾಡುವುದಕ್ಕಿಂತಲೂ, ಸತ್ಯವನ್ನು  ಅರಿತು ಮುಂದೆ ತೆಗೆದುಕೊಳ್ಳಬೇಕಾದ ಹೆಜ್ಜೆ ತುಂಬಾ ಮುಖ್ಯ.

ಸಂಘ ರಾಜಕೀಯಕ್ಕಿಳಿಯಲಿ!

ಸಂಘದ  ಎಷ್ಟೂ ಅಂಗ ಸಂಸ್ಥೆಗಳಿವೇ - ವನವಾಸಿ ಕಲ್ಯಾಣ, "YOUTH FOR SEVA", ABVP,  BMS, EKAL vidyalaya, Hindu Seva Prathisthana, NELE ....

BJP ಕೂಡ ಸಂಘದ ಒಂದು ಅಂಗ ಸಂಸ್ಥೆಯೇ ಹೌದು  . ಸಂಘದಲ್ಲಿ ಎಲ್ಲವೂ ವಿಕೇಂದ್ರಿತ. ಸಲಹೆ ಕೊಡುವ ಅಧಿಕಾರ ಅವರಿಗೆ ಇದ್ದೇ ಇದೆ.  ಅತ್ಯುತಮ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ, ವಾಜಪೇಯಿ, ಅಡ್ವಾಣಿ - "ಸಂಘದ ಪ್ರಚಾರಕರಗಿದ್ದರು",


ಕೋನೇ ಮಾತು:
ಸಮುದ್ರದಷ್ಟೂ ವಿಶಾಲವಾದ ಸಂಘ ಕಾರ್ಯದಲ್ಲಿ ನಾನು ವಿವರಿಸಿರುವುದು  ಒಂದು ಹನಿಯಷ್ಟೂ ಅಲ್ಲ. ಅಷ್ಟು ಸಮಯವೂ ನನಗಿಲ್ಲ .

ಸಿಂಧಗಿಯಲ್ಲಿ ನಡೆದ ಘಟನೆ ಬಗ್ಗೆ ಇನ್ನೂ ತನಿಖೆ ಪೂರ್ಣಗೊಂಡಿಲ್ಲ.  ಯಾವುದೋ ಒಂದು ಘಟನೆ ಹಿಡಿದು ದೊಡ್ಡದಾಗಿ ಮಾಡವುದು , ಸಂಘವನ್ನು ತಪ್ಪು ಎನ್ನುವುದು ಸರಿಯಲ್ಲ.

ಸಂಘವೂ 80 ವರ್ಷಗಳಿಂದ ಇಂತಹ ಎಷ್ಟೂ ಪ್ರತಿರೋಧ ಎದುರಿಸಿ ಬೆಳೆದಿದೆ. ಮುಂದೆಯೂ ಬೆಳೆಯುತ್ತದೆ.

Monday, January 16, 2012

Bidar

ಮಧ್ಯ, ದಕ್ಷಿಣ, ಕರಾವಳಿ ಕರ್ನಾಟಕ ಕಂಡಿದ್ದ ನನಗೆ ಉತ್ತರ ಕರ್ನಾಟಕ ಒಂದು ಬಾಕಿ ಉಳಿದಿತ್ತು.

ಸರಿ ಬೀದರ್, ಗುಲ್ಬರ್ಗಾ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳನ್ನು ಅಂತರ್ಜಾಲದಲ್ಲಿ ಹುಡುಕಿ ಕೆಲವು ಜಾಗಗಳನ್ನು ರೈಲ್ವೇ ಟಿಕೆಟ್ ಬುಕ್ ಮಾಡಿದೆ

ಬೆಂಗಳೂರಿನಿಂದ ಬೀದರ್ ಗೆ ರೈಲಿನಲ್ಲಿ ಸುಮಾರು 15 ಗಂಟೆ ಪ್ರಯಾಣ. ರೈಲಿನಲ್ಲಿ ನನ್ನ ಒಂದು ಅನುಭವ. ಬೆಳಗ್ಗೆ 8 ಗಂಟೆ ಗೆ ಎದ್ದಾಗ  ನನಗೆ ಸಿಕ್ಕಿದ್ದು ಬಸವನಗುಡಿ ಯಲ್ಲಿ , ಹೋಮಿಯೋಪತಿ ಅಂಗಡಿಯಲ್ಲಿ ಕೆಲಸ ಮಾಡುವ ಒಬ್ಬ ವ್ಯಕ್ತಿ. ಅವನು ಮೂಲತಃ  ಬಿದರಿನವನು.  ಒಬ್ಬ ಕ್ರೈಸ್ತ. ಅವನೊಂದಿಗೆ ಸುಮಾರು 40 ಜನ  ಎಲ್ಲರೂ ಕ್ರಿಸ್ ಮಸ್ ಗೆ 2 ವಾರಗಳ ಕಾಲ ಹಿಂತಿರುಗುತ್ತಿದ್ದರು.  ಹಾಗೆ ಮಾತನಾಡುವಾಗ ಸ್ವಲ್ಪ ಕ್ರೈಸ್ತ ಧರ್ಮದ ಉಪದೇಶ ಮಾಡಿದ. ಮೂರ್ತಿ ಪೂಜೆ ಕೆಟ್ಟದ್ದು ಅಂತ ಹೇಳಿದ. ಈ ನನ್ನ ಪ್ರಯಾಣದಲ್ಲಿ ನಾನೇ ವಾದ ಮಾಡುವ ಇಷ್ಟವಿಲ್ಲದಿದ್ದರಿಂದ ಸುಮ್ಮನೆ ಎಲ್ಲ ಕೇಳಿದ. ಅತೀ ಬಡವ ಮನೆತನದಿಂದ ಬಂದಿದ್ದ ಅವರು, ಬೆಂಗಳೂರಿನಲ್ಲಿ ಈಗ ಅವರ ಕುಟುಂಬದವರು ಎಲ್ಲರೂ ಸರಿ  ಲಕ್ಷ - ಲಕ್ಷ ವ್ಯಾಪಾರ ಮಾಡುತ್ತರಂತೆ. ಎಷ್ಟೇ ದುಡಿದರೂ ಸಹ ಲಾಭದಲ್ಲಿ 10% ಅನ್ನು ಖಡ್ಡಾಯವಾಗಿ ತಮ್ಮೊರಿನ ಚರ್ಚ್ ಗೆ ಕೊಡುತ್ತರಂತೆ.   "ಸರಿ ನೀವು ಟಾಕ್ಸ್ ಕಟ್ಟುತೀರ ಅಂತ ಕೇಳಿದರೆ" ನಿರುತ್ತರನಾದ.   ನಮ್ಮ ದೇಶದ ಧರ್ಮ ಎಂಬುದು ಒಮ್ಮೊಮ್ಮೆ ಅಂಟಿದ ಶಾಪ ಎನಿಸುತ್ತದೆ ( ಗಾಲಿ  ರೆಡ್ಡಿ:  45 ಕೋಟಿ ಕಿರೀಟವನ್ನು ತಿರುಪತಿಗೆ ಕೊಡುತ್ತಾನೆ , ನೆಟ್ಟಿಗೆ ಕಂದಾಯ ಕಟ್ಟುವುದಿಲ್ಲ )

ಬಿಡರ್ನಲ್ಲಿ ಇಳಿದಾಗ 3 ಗಂಟೆ . ಅಲ್ಲಿಂದ ನಡೆದುಕೊಂಡು ಹೋಗಿ ಒಂದು ಹೊಟೇಲ್ ನಲ್ಲಿ ಉಳಿದುಕೊಂಡೆ.

ಹೋಟೆಲ್ನಲ್ಲಿ ಮಾತನಾಡಿ ಜಾಗಗಳ ದೊರವನ್ನು ತಿಳಿದು ಕೊಂಡು ಪ್ರಯಾಣ ಶುರು ಮಾಡಿದೆ .

ಮೊದಲು ಹೋಗಿದ್ದು - ಗುರುದ್ವಾರಕ್ಕೆ . ಇಲ್ಲಿಗೆ ಗುರು ನಾನಕ್ ಭೇಟಿ ನೀಡಿದ್ದರಂತೆ . ಇದನ್ನ ಸಿಖ್ಖರು ಮಿನಿ ಪಂಜಾಬ್ ಮಾಡಿಕೊಂಡಿದ್ದಾರೆ.


ಗುರುದ್ವಾರಕ್ಕೆ ಪ್ರವೇಶ ಮಾಡುವ ಮೊದಲು ತಲೆಗೆ ಬಟ್ಟೆ ಕಟ್ಟಿ ಕೊಳ್ಳುವುದು ಕಡ್ಡಾಯ . ಪಕ್ಕದಲ್ಲಿಯೇ ನಾನಕ ಜರಿ ಇದೆ. ಇಲ್ಲಿ ನಾನಕರು ನೀರು ಕುಡಿದ ಜಾಗ ಇದೆ.


ಒಳಗೆ ಗುರು ಗ್ರಂಥ ಸಾಹಿಬ ನ ಮುಂದೆ - ಎಲ್ಲ ರೀತಿಯ ಆಯುಧಗಳನ್ನು ಇಟ್ಟಿದ್ದಾರೆ.   ಈ ಶಸ್ತ್ರ ಪೂಜೆಯಿಂದಲೆ  ಇವರು ಮೊಘಲ್ ಸಾಮ್ರಾಜ್ಯ ಮುಗಿಸಿ, ಮತ್ತೆ ಹಿಂದೂ ರಾಷ್ಟ್ರ ಕಟ್ಟಲು ಶಕ್ತವಾದರೂ ಅಂತ ಸ್ಪಷ್ಟ.  ಪಕ್ಕದಲ್ಲಿರು ಒಂದು ಮಂದಿರದಲ್ಲಿ ಎಲ್ಲ ಸಿಖ್ ಮಹಾತ್ಮರ ಫೋಟೋ ಇಟ್ಟಿದ್ದಾರೆ.
  

                                    

ಗುರುದ್ವಾರ ಪಕ್ಕದಲ್ಲಿಯೇ ಹಜ್ರತ ಸಯೀದ್ ಅವರ ಸಮಾಧಿ ಇದೆ. ಇವರು ಬಹಮನಿ ರಾಜನೊಬ್ಬನ ರಾಜ ಗುರುವಾಗಿದ್ದಾರಂತೆ. ಇಲ್ಲಿ ಮುಸಲ್ಮಾನರಿಗೆ ಉರಸ್ ನಡೆಸುವುದಕ್ಕೆ ನಿಷೇಧವಿಧೆ.




ನಂತರ ಅಲ್ಲಿಂದ ಸುಮಾರು 1 ಕಿಲೋಮೀಟರ್ ಮುಂದೆ - ಬರೀದ್ ಶಾಹಿ ಉದ್ಯಾನ ಇದೆ. ಇಲ್ಲಿ ರಾಜ ವಂಶದವರ ಸಮಾಧಿಯಿದೆ. ಈ ರಾಜರುಗಳು ತುರ್ಕಿ (TURKEY) ಮೂಲದವರು. 

ಇಲ್ಲಿಂದ ಮುಂದೆ 2 ಕಿಲೋಮೀಟರ್ ನಡೆದು ಹೋದರೆ ಪಾಪನಾಶ ದೇವಸ್ಥಾನ ಸಿಗುತ್ತದೆ.  ಇದರ ಪಕ್ಕದಲ್ಲಿಯೂ ಸಹ ಒಂದು ನೀರಿನ ಜರಿ ಇದೆ.
 
                                       


ಸುಮಾರು 5-6 ಕಿಲೋಮೀಟರ್ ನಡೆದು ಸುಸ್ತಾಗಿತ್ತು. ಆಟೋ ಹಿಡಿದು ಹೋಟಲ್ಗೆ ಹೋದೆ.

ಬೆಳಗ್ಗೆ ಎದ್ದು ಬೀದರ್ ಕೋಟೆಗೆ ವಾಕಿಂಗ್ ಶುರು . ಬಿದರ್ನಲ್ಲಿ ಒಂದು ಭವ್ಯವಾದ ಕೋಟೆ ಇದೆ.  ಇದು ಹಿಂದೂ ರಾಜರಾದ ಕಲ್ಯಾಣಿ ಚಾಲುಕ್ಯರು,  ಕಾಕತಿಯರು ಕಟ್ಟಿದ ಈ ಕೋಟೆಯನ್ನು ದೂರದಿಂದ ಬಂದ ತುರ್ಕಿಗಳು (TURKEY) ಹಾಗೋ ಪೆರ್ಸಿಯನ್ನಾರು (persians) ಆಕ್ರಮಿಸಿ ಬಳಸಿಕೊಂಡರು. ಚಿತ್ರದುರ್ಗದ ಕೋಟೆಗೆ ಹೊಲಿಸಿದರೆ ಇದನ್ನು ಅತ್ಯಂತ ಕಳಪೆ ಮಟ್ಟದಲ್ಲಿ ಇದನ್ನು ನಿರ್ವಹಣೆ ಮಾಡುತ್ತಿದ್ದರೆ. ಕೋಟೆಯ ಸುತ್ತಲೂ ಕೊಳಚೆ ನೀರು ಹರಿಯುತ್ತದೆ. 



ಕೋಟೆಯ ಸುತ್ತಲೂ ನೀರು ಹರಿದಾಡಲೂ ದೊಡ್ಡ ಕಂದಕಗಳಿವೆ.  ಇದೇ ರೀತಿಯ ಕೋಟೆಗಳನ್ನು ನೀವು ಬಸವ ಕಲ್ಯಾಣ, ಗುಲ್ಬರ್ಗಾ ಇಲ್ಲೂ ಸಹ ನೋಡಬಹುದು





ಪ್ರಮುಖ ಬಾಗಿಲು
 ಮೇಲಿನ ಬಾಗಿಲಿನ ಮುಂದೆ ಈ ಕಲ್ಲನ್ನು ಪೂಜೆ ಮಾಡುತ್ತಾರೆ. ಕೇಳಿದಾರ ಒಬ್ಬ ದಾರಿ ಹೊಯ್ಕ ಇದನ್ನು ಪಾಂಡುರಂಗನ ವಿಗ್ರಹ ಎಂದ.  ವಿಭೂತಿಯನ್ನು ನೋಡಿದರೆ ಇದು ಶಿವಲಿಂಗದ ಭಾಗ ಎಂದು ತಿಳಿಯುತ್ತದೆ. (ಮುಹಮ್ಮದ್ ಘಜ್ನಿ ಕೂಡ ಸೋಮನಾಥ ದೇವಾಲಯದ ಶಿವಲಿಂಗವನ್ನು ಮೆಟ್ಟಿಲು ಮಾಡಿದ್ದು ಎಲ್ಲರಿಗೂ ತಿಳಿದಿದೆ)
                                    


ಕೋಟೆಯ ಒಳಗಡೆ ಇನ್ನೊಂದು ಹಳೆಯ ಕೋಟೆಯಿದೆ. ಅದರ ಚಿತ್ರ

 
ಹಳೆಯ ಕೋಟೆ
ಮುಂದೆ ಕೋಟೆಯಲ್ಲಿ ಒಂದು ಕೆರೆ ಕಾಣುತ್ತದೆ.
ಬೊಮ್ಮಗೊಂಡೈಯ್ಯ ಕೆರೆ
 ಸುಮಾರು 700 ವರ್ಷಗಳ ಕಾಲ ಇಸ್ಲಾಮಿಕ್ ಆಡಳಿತದಲ್ಲಿದ್ದರೂ ,ಕೋಟೆಯಲ್ಲಿರುವ ಈ ಕೆರೆಗೆ ಅಚ್ಚ ಕನ್ನಡ ಹೆಸರೇ ಉಳಿದುಕೊಂಡಿದೆ.





ಕನ್ನಡ ಶಾಸನ
 ಕೋಟೆಯಲ್ಲಿ ಓಡಾಡುವಾಗ ಒಂದು ಉಚ್ಚ್ಚೆ ಮಾಡುವ ಜಾಗ ಕಂಡಿತು. ಅಲ್ಲಿ ಸಿಕ್ಕ ಒಂದು ಕನ್ನಡ ಶಾಸನ. ನಾನು ಕಷ್ಟಪಟ್ಟು ತೆಗೆದ ಒಂದು ಫೋಟೋ

ಕೋಟೆಯಲ್ಲಿ ವಿಶಾಲವಾದ ಜಾಗ

ಕೋಟೆ ನೋಡಿದ ನಂತರ ಮುಸಿಯಮ್ ಗೆ ಭೇಟಿ ಕೊಟ್ಟೆ. ಒಳಗೆ ಕನ್ನಡದ ಕೆಲ್ವು ಶಾಸನಗಳು, ಗಣೇಶ, ದೇವತೆಯರ,  ಕಾಕತಿಯರ ವಿಗ್ರಹಗಳು ಕಾಣಿಸುತ್ತವೆ.
ಕೋಟೆಯ ಮುಸಿಯಮ್ ನಲ್ಲಿ ಇರುವ ಹಿಂದೂ ವಿಗ್ರಹಗಳು



ಮುಸಿಯಮ್ ಎದುರಿಗಿರುವ ಉದ್ಯಾನ ಮತ್ತು ಬಲದಲ್ಲಿ ಮಸೀದಿ 

ರಾಣಿಯ ಗೃಹಗಳು 

 ಕೋಟೆಯ ಒಳಗೆ ಇರುವ ಯಾವುದೇ ಸೆಕ್ಯೂರಿಟೀ ಗಾರ್ಡ್ ಗೆ ಕನ್ನಡ ಬರುವುದಿಲ್ಲ.  ಇಡೀ ಕೋಟೆಯಲ್ಲಿ ನಿಮಗೆ ಒಂದೇ ಒಂದು ಕನ್ನಡ ಬೋರ್ಡ್ ಸಿಕ್ಕರೆ ಪುಣ್ಯ.  ನನಗೆ ಇಬ್ಬರು ಬಾಲಕರು ಒಳಗೆಸಿಕ್ಕಿದರು. ಒಬ್ಬನೊಂದಿಗೆ ನಾನು ಕನ್ನಡಲ್ಲಿ ಮಾತನಾಡುತ್ತಿರುವಾಗ, ಇನ್ನೊಬ್ಬ ಅವನಿಗೆ - "ಹಿಂದಿ ಮೇ ಬಾತ್ ಕಾರ್" (ಅವನೂ ನಂತರ ಕನ್ನಡಲ್ಲಿ ಮಾತನಾಡಿದ) ಅಂತ ಉಪಾದೇಶ  ನೀಡಿದ. ಈ ಬಾಲಕನೇ ಹೀಗೆ ಮಾತನಾಡಿದರೆ, ಇಲ್ಲಿನ ಮುಸ್ಲಮನರೆ ಮನಸ್ಥಿತಿ ಹೇಗಿರಬೇಡ ಅಂದುಕೊಂಡೆ.


ಇಲ್ಲಿಂದ ಮುಂದೆ ಮಹಮ್ಮದ್ ಗವನ್ ಅರಬಿಕ್ ಯೂನಿವರ್ಸಿಟೀ (ಅಂತ ನಾನು ಓದಿದ್ದು) ನೋಡಲು ಹೋದೆ . ಇದು ಪೂರ್ಣ ಮುಸ್ಲಿಂ ಬಡವಣೆಯಲ್ಲಿದೆ. ಇಲ್ಲಿ ನೀವು ಮಾತನಾಡಿಸಿದರೂ ಕೂಡ ಯಾವುದೇ ಮುಸ್ಲಿಂ ಕನ್ನಡ ಮಾತನಾಡುವುದಿಲ್ಲ. ಸ್ಟೇಷನ್ ಹತ್ತಿರ ಸಿಕ್ಕ ಮತ್ತೊಬ್ಬ ಮುಸಲ್ಮಾನನು ಕನ್ನಡ ಮಾತನಾಡಲಿಲ್ಲ.

ಇಲ್ಲಿನ ಮುಸ್ಲಮನರಲ್ಲಿ ಇನ್ನೊ ಬಹಮನಿ, ನಿಜಾಮ್, ಗತ ಕಾಲದ ನೆನೆಪಿನಲ್ಲಿದ್ದಾರೆ ಅಂತ ಅನಿಸುತ್ತದೆ.  ನಿಜಮಾನ ಆಳ್ವಿಕೆಯಲ್ಲಿದ್ದ ತೆಲಂಗಾಣ ಪ್ರದೇಶವೇನಾದರೂ ಬೇರೆ ರಾಜ್ಯವಾದರೆ - ಇಲ್ಲಿನ ಮುಸಲ್ಮಾನರೂ ಕೂಡ ನಮ್ಮನೂ ತೆಲಂಗಣಕ್ಕೆ ಸೇರಿಸಿ ಅಂತ ಒತ್ತಾಯಿಸುವುದರಲ್ಲಿ ಆಶ್ಚರ್ಯವಿಲ್ಲ. (ತೆಲಂಗಾಣ ಪ್ರದೇಶ ನಿಜಮಾನ ಅಧಿಕಾರದಲ್ಲಿತ್ತು. ಅಲ್ಲಿ ಮುಸಲ್ಮಾನರೂ ಹೆಚ್ಚಿನ ಸಂಕ್ಯೆಯಲ್ಲಿದ್ದಾರೆ. ಆದಕ್ಕಾಗಿ ಮುಸಲ್ಮಾನರು ಹೋರಾಟ ಮಾಡುತ್ತಿರುವುದು, ಮುಸಲ್ಮಾನರು ಬಹುಸಂಕ್ಯತರಿರುವ ರಾಜ್ಯ ಸ್ಥಾಪಿಸುವುದಕ್ಕೆ)

ದಾರಿಯಲ್ಲಿ 3 ಗೋಮಾಂಸದ ಅಂಗಡಿಗಳನ್ನು ರಾಜ ರೋಷವಾಗಿ ನಡೆಸುಟ್ಟಿದುದು ಕಂಡು ಬಂತು.  ಮುಂದೆ ಕಟ್ಟಡವನ್ನು ನೋಡಿದ ಮೇಲೆಯೇ ನನಗೆ ತಿಳಿದಿದ್ದು - ಅದು ಯೂನಿವರ್ಸಿಟೀ ಅಲ್ಲ ಕೇವಲ ಮದ್ರಸ ಎಂದು . ಇಷ್ಟು ಸಣ್ಣ ಕಟ್ಟಡವನ್ನು ಹೇಗೆ ಯೂನಿವೇರ್ಸಿಟಿ ಅಂತ ಕರೆದರೋ ತಿಳಿದಿಲ್ಲ



 ಗವನ್ ಮದ್ರಸ ಮುಗಿಸಿ ನರಸಿಂಹ ಝರಿ ನೋಡಲು ಹೋದೆ . ಇದು ಜನ ನರಸಿಂಹ ಜರ್ನ ಅಂತ ಹಿಂದಿ ಹೆಸರು ಇತ್ತು ಕರೆಯುತ್ತಾರೆ.  ಇಲ್ಲಿ ಎದೆಯ ಮಟ್ಟದವರೆಗೂ ನೀರಿನಲ್ಲಿ ನಡೆದುಕೊಂಡು ನರಸಿಂಹನ ದರ್ಶಣ ಮಾಡಬೇಕು. ದೊಡ್ಡ ಸಾಲು ಇದ್ದುದರಿಂದ ನಾನು ಒಳಗೆ ಹೋಗಲಿಲ್ಲ. 


ನರಸಿಂಹ ದೇವಸ್ಥಾನ ಬಲ ಪಕ್ಕದಲ್ಲಿ ಮಸೀದಿ


ಇಷ್ಟು ಮುಗಿಸಿ ಬಸ್ಸು ಹತ್ತಿ ಬಸವ ಕಲ್ಯಾಣದ ಕಡೆ ಪ್ರಯಾಣ ಶುರು ಮಾಡಿದೆ. 

Monday, October 17, 2011

ಸುಧಾರಿಸಬೇಕಾದ ಭಾರತದ ವಿದೇಶಾಂಗ ನೀತಿ

ಹಾಯ್,

ಯಾವುದೇ ದೇಶಕ್ಕೆ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು, ಶತ್ರುಗಳನ್ನು ಮಟ್ಟ ಹಾಕಲು ನಮ್ಮ ರಕ್ಷಣಾ ಪಡೆಗಳಷ್ಟೇ ಅಲ್ಲ ಸಮರ್ಥ ವಿದೇಶಾಂಗ ನೀತಿಯ ಅವಶ್ಯಕತೆಯಿದೆ.  ನಮ್ಮ ರಾಷ್ಟ್ರದ ಸುತ್ತಲೂ ಶತ್ರುಗಳೂ ಸನ್ನದ್ದರಗುತ್ತಿರುವುದು ಹಗರಣಗಳಲ್ಲಿ ಮುಳುಗಿರುವ ನಮ್ಮ ರಾಜಕಾರಣಿಗಳಿಗೆ ಕಾಣಿಸುತ್ತಿಲ್ಲ. 

ನಾವಂದುಕೊಂಡಂತೆ ವಿದೇಶಾಂಗ ನೀತಿಯಲ್ಲಿ ಕಣ್ಣಿಗೆ-ಕಣ್ಣು ಎನ್ನುವ ನಿಯಮವನ್ನು ಅನುಸರಿಸಲಾಗುವುದಿಲ್ಲ ನಿಜ, ಆದರೆ ನಮ್ಮ ವಿದೇಶಾಂಗ ನೀತಿ ನೋಡಿದರೆ ಅದರಲ್ಲಿ ಒಂದು ಗತ್ತು,  agression ಇಲ್ಲ ಎನಿಸುತ್ತದೆ.  ಬನ್ನಿ ನೋಡೋಣ.

ಪಾಕಿಸ್ತಾನ:
ಮೊದಲು, ಭಾರತ ಎನ್ನುವ ಪದಗಳನ್ನೇ ಭೂಮಿಯಿಂದ ಅಳಿಸಲು ಪ್ರಯತ್ನಿಸುತ್ತಿರವ ಪಾಕಿಸ್ತಾನದ ಬಗ್ಗೆ ಗಮನಿಸೋಣ. ಪಾಕಿಸ್ತಾನ ನಮ್ಮ ದೇಶದಲ್ಲಿ ಮಾಡುತ್ತಿರುವ ಕಿತಾಪತಿ ಎಲ್ಲರಿಗೂ ಗೊತ್ತಿದೆ. ಕಾಶ್ಮೀರ ಇರಬಹುದು, ಬಾಂಬ್ ಸ್ಪೋಟಗಳು, ಕೋಟಾ ನೋಟುಗಳಿರಬಹುದು ಎಲ್ಲದರಲ್ಲೂ ಆದ ಕೈವಾಡವಿದೆ.  ಆದರೆ ನಮ್ಮ ದೇಶವವರು ಕಡ್ಲೆ ಪುರಿ ತಿನ್ನುತ್ತಿದರೆಯೇ ಗೊತ್ತಾಗುತ್ತಿಲ್ಲ.

೧. ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಒಂದು ದೊಡ್ಡ ಸ್ವಾತಂತ್ರ್ಯ ಹೋರಾಟವೆ ನಡೆಯುತ್ತಿದೆ.  ಅದಕ್ಕೆ ನಮ್ಮ ದೇಶದವರ ಕುಮ್ಮಕ್ಕು ಇದೆಯಂದು ಪಾಕಿಸ್ತಾನಕ್ಕು ಸಹ ಸಾಕ್ಷ್ಯ ಕೊಡಲಾಗುತ್ತಿಲ್ಲ. ಅಮೆರಿಕ ಕೂಡ ಅಲ್ಲಿ ಭಾರತದ ಕೈವಾಡವಿಲ್ಲ ಎಂದು ಹೇಳುತ್ತಿದೆ. ಬಲೂಚಿ ಹೋರಾಟಗಾರರೂ ಕೂಡ ನಮಗೆ ಭಾರತದಿಂದ ಸಹಾಯ ಸಿಗುತ್ತಿಲ್ಲ ಎಂದು ಕೊರಗುತ್ತಿದ್ದಾರೆ.  ಶತ್ರು ದೇಶದಲ್ಲಿ ಇಂತಹ ಒಂದು ಅವಕಾಶವನ್ನು ಕೈ ಬಿಡುವ ಮೂರ್ಖತನ ಇನ್ನೊಂದಿಲ್ಲ.

೨ . ನಿರಂತರವಾಗಿ ಉಗ್ರರೂ ನುಸುಳಿ ಇಲ್ಲಿ ದಾಂದಲೆ ಮಾಡುತ್ತಿದ್ದರೂ, ಪಾಕಿಸ್ತಾನಕ್ಕೆ ಪಾಟ ಕಲಿಸುವ ದಮ್ಮಿಲ್ಲ. ಅವರಿಗಿಂತ ದೂಡ್ಡ ಸೇನೆ, ಹೆಚ್ಚು ಯುದ್ದ ವಿಮಾನಗಳು, ನೌಕಾಪಡೆ , ಮಿಸೈಲ್ ಗಳು ಇದ್ದು ಯಾವ ಉಪಯೋಗ. ಬಹುಶಃ ಆಯುಧ ಪೂಜೆಯೆಂದು ಪೂಜಿಸಲು ಇರಬೇಕು.

೩ . ತೊಂಬತ್ತಾರ ದಶಕದಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ಯುದ್ಧ ವಿಮಾನ ಪೂರೈಕೆ ನಿಲ್ಲಿಸಿತು. ಆಗ ಪಾಕಿಸ್ತಾನಕ್ಕೆ ಕಾಣಿದ್ದು ಚೀನ. ಚೈನ ಇಂದು ಪಾಕಿಸ್ತಾನಕ್ಕೆ ತಾನು ತಯಾರಿಸುವ ಅತ್ಯಾದುನಿಕ ಜೆ‌ಎಫ್-17 ಪೂರೈಸುತ್ತಿದೆ. (ಈ ವಿಮಾನ ಕೂಡ ನಮ್ಮ ತೇಜಸ್ ನಂತೆ ದೇಶಿಯವಾಗಿ ತಯಾರಿಸಿದ್ದು) . ಆದರೆ ಇದರಲ್ಲಿ ಬಳಕೆಯಾಗುವುದು ರಷ್ಯಾದ RD-93 ಇಂಜಿನ್ ಗಳು(ನಮ್ಮ ತೇಜಸ್ ನಲ್ಲಿ ಬಳಕೆಯಾಗುವುದು ಅಮೆರಿಕದ GE ಇಂಜಿನ್ ಗಳು ;-) ). ರಷ್ಯಾ ನಮ್ಮ ಪರಮಾಪ್ತ ರಾಷ್ಟ್ರವಾದರೂ ಕೂಡ (ಅವರಿಗೆ ನಾವೇ ಅತೀ ಹೆಚ್ಚು ಮಿಲಿಟರಿ ವ್ಯಾಪಾರ ಮಾಡುವುದು) ನಮ್ಮಿಂದ ಏನು ಮಾಡಲಾಗಿಲ್ಲ.

೪ . ಪಾಕಿಸ್ತಾನಕ್ಕೆ ಉಗ್ರರ ವಿರುಧ್ಧ ಹೊರಡಲೂ ಅಮೆರಿಕ ಪಾಕಿಸ್ತಾನಕ್ಕೆ ಬಿಲ್ಲಿಯಾಂತರ ಡಾಲರ್ ಕೊಡುತ್ತಿದೆ. ಇದೇನೋ ಸರಿ. ಗನ್ನು, ಬಾಂಬ್ ಗಳನ್ನು ಕೊಡಲಿ. ಆದರೆ ಅವರನ್ನು ಹೆಚ್ಚು ಓಲೈಸಲು ಅವರಿಗೆ ಅತ್ಯಾಧುನೀಕ PC-3 ಒರಿಯಾನ್ ವಿಮಾನಗಳನ್ನು, UAV (Unmanned Aircraft Vehicle) ಪೂರೈಸುತ್ತಿದೆ. ಖಂಡಿತವಾಗಿಯೂ ಇವುಗಳ ಉಪಯೋಗವಾಗುವುದು ಉಗ್ರರ ವಿರುದ್ದವಲ್ಲ, ಭಾರತದ ವಿರುದ್ದ.
ಅಮೆರಿಕದ ಮಾತು ಕೇಳಿ ಭಾರತ ಇರಾನ್ ನೊಂದಿಗಿನ ಸಂಬಂಧವನ್ನು ಕಡೆದುಕೊಳ್ಳುತ್ತದೆ. ಅಮೆರಿಕ ತನಗೆ ಭಾರತ ಅತ್ಯುತ್ತಮೆ ಸ್ನೇಹಿತ ಎಂದು ಬೊಗಳೆ ಹೊಡೆಯುತ್ತದೆ. ಆದರೆ ಅಮೆರಿಕ ಪಾಕಿಸ್ತಾನಕ್ಕೆ ಕೊಡುವ ಅತ್ಯಾಧುನೀಕ ಶಸ್ತ್ರಗಳನ್ನು ತಡೆಯುವ ತಾಕತ್ತಿಲ್ಲ ನಮಗೆ.

೫ .  ಪ್ರತಿ ಸಲ ನಡೆಯುವ Organization  of  Islamic Conference ಸಭೆಗಳಲ್ಲಿ - ಎಲ್ಲ ಮುಸಲ್ಮಾನ ರಾಷ್ಟ್ರಗಳು ಕಾಶ್ಮೀರದ ವಿಷಯದಲ್ಲಿ ಪಾಕಿಸ್ತಾನದ ಪರವಾದ ವಾದವನ್ನೇ ಬೆಂಬಲಿಸುತ್ತವೆ. ನಾವು ಇದನ್ನು ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳುತ್ತೇವೆ. ಇಷ್ಟೇ ಆದರೆ ಸಾಕಿತ್ತೇನೋ ? ಆದರೆ ನಮ್ಮ ಪ್ರತಿನಿಧಿಗಳು ಒಂದು ಹೆಜ್ಜೆ ಮುಂದೆ ಹೋಗಿ ಇಸ್ರೇಲ್ - ಪಾಲೆಸ್ತಿನ್ ವಿಚಾರದಲ್ಲಿ ಗಂಟಾ-ಘೋಷವಾಗಿ ಆ ಮುಸಲ್ಮಾನ ರಾಷ್ಟ್ರಗಳನ್ನೇ ಬೆಂಬಲಿಸುತ್ತೇವೆ.

 ೬  . ಲಿಬ್ಯಾದ ಮಾಜಿ ಸರ್ವಾಧಿಕಾರಿ ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನದ ಕಟ್ಟಾ ಬೆಂಬಲಿಗ. ಅವನ ಹೆಸರಿನಲ್ಲಿ ಪಾಕ್ ನಲ್ಲಿ "ಗಡಾಫಿ" ಕ್ರಿಕೆಟ್ ಸ್ಟೇಡಿಯಂ ಇದೆ.  ಮೊನ್ನೆ ಅಮೆರಿಕ ಮಿಲಿಟರಿ ಕಾರ್ಯಚರಣೆಯಲ್ಲಿ ಇವನ್ನನ್ನು ಒದ್ದೋಡಿಸುವಾಗ, ಅವರನ್ನು ಬಾಯಿ ಮಾತಿನಲ್ಲಾದರೂ ಬೆಂಬಲಿಸುವ ಬದಲು ಏನು ನಡೆದೇ ಇಲ್ಲವೆಂಬಂತೆ ಇದ್ದರು ನಮ್ಮ ವಿದೇಶಾಂಗ ಸಚಿವರು.

ಚೀನಾ:
ಈ ಚೀನಿ ಕುಳ್ಳರ ಕಿತಾಪತಿ ಪಾಕಿಸ್ತಾನಕ್ಕಿಂತ ಜಾಸ್ತಿ.

೧.  ಅರುಣಾಚಲ ಪ್ರದೇಶ ಬೇಕು ಅಂತ ಯುದ್ಧ ಮಾಡಿದ ಚೀನಾ ನಮ್ಮ ಜಮ್ಮು ಕಾಶ್ಮೀರದ ೧/೩ ಭಾಗ ಆಕ್ರಮಿಸಿಕೊಂಡಿದೆ.
 ಅವಕಾಶ ಸಿಕ್ಕಾಗಲೆಲ್ಲ ತನಗೆ ಅರುಣಾಚಲ ಪ್ರದೇಶ ಬೇಕು ಅಂತ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಬೊಬ್ಬೆ ಹಿಡಿಯುತ್ತದೆ.

ಅಲ್ಲ ಗುರುವೇ, ಚೀನಾ ಆಕ್ರಮಿಸಿಕೊಂಡಿರುವ ಕಾಶ್ಮೀರದ ಭಾಗವನ್ನು   (aksai - ಚೀನಾ ) ತನಗೆ ವಾಪಾಸ್ ಬಿಟ್ಟುಕೊಡು ಎಂದು ಭಾರತ ಕೇಳಿದ ನಿದರ್ಶನವೇ ಇಲ್ಲ.

೨. ಹಿಂದೂಗಳಿಗೆ ಪವಿತ್ರವಾದ ಕೈಲಾಸ ಪರ್ವತ ಚೀನಾದ ಹಿಡಿತದಲ್ಲಿದೆ. ಇದರ ಮೇಲೆ ಚೀನಾ ಹೇಗೆ ಹಕ್ಕನ್ನು ಸಾದಿಸುತ್ತದೆಯೋ ಗೊತ್ತಿಲ್ಲ, ಆದರೆ ರಾಜಕಾರಾಣಿಗಳಿಗೆ ಇದು ತಿಳಿದಂತೆ ತೋರುವುದಿಲ್ಲ.

೩. ನಮ್ಮ ಈಶಾನ್ಯ ರಾಜ್ಯಗಳಲ್ಲಿ - ULFA , NSCN ಭಯೋತ್ಪಾದಕರಿಗೆ ಚೀನಾದ ಸಂಪೂರ್ಣ ಕುಮ್ಮಕ್ಕಿದೆ.   ಹೀಗೆಯೇ ಚೀನಾಗೆ ಕೂಡ ಸಿನ್ಕಿಯಂಗ್ ರಾಜ್ಯದಲ್ಲಿ ಮುಸ್ಲಿಂ ಉಗ್ರರ ಉಪಟಳವಿದೆ.  ಇದರಲ್ಲಿ ಭಾರತ ಕೈವಾಡವಿದೆ ಎಂದು ಭಾವಿಸಿದರೆ ನೀವು ಮತ್ತೆ ತಪ್ಪಿದ್ದಿರ.  ಇನ್ನೊಂದು ಆಶ್ಚರ್ಯದ ವಿಷಯವೆಂದರೆ ಇವರಿಗೆ ಕುಮ್ಮಕ್ಕು ಸಿಗುತ್ತಿರುವುದು - ಪಾಕಿಸ್ತಾನದ ಮುಸ್ಲಿಂ ಉಗ್ರರಿಂದ ;-) . ಆದರೆ ಪಾಕಿಸ್ತಾನ ಸರಕಾರ ಏನೋ ಇದರಿಂದ ದೂರ ಉಳಿದಿದೆ.

೪. ನಮ್ಮಲ್ಲಿ ಟಿಬೆಟ್ಟಿನ ಜನರು ದಂಡಿಯಾಗಿ ಬಿದ್ದಿದ್ದರೆ. ಇವರಿಗೆ ಸರಿಯಾಗಿ ತರಬೇತಿ, ಮಾರ್ಗದರ್ಶನ ಕೊಟ್ಟು ಚೀನಾದ ವಿರುದ್ಧ ಸ್ವಾತಂತ್ರ್ಯಕ್ಕೆ ದಂಗೆ ಏಳಲು ಹುರಿದುಂಬಿಸುವುದು ಭಾರತಕ್ಕೆ ಕಷ್ಟವಲ್ಲ.  ಇವರು ಚೀನಾದ ವಿರುದ್ದ ಭಾರತದ ಅತ್ಯುತ್ತಮ ಅಯುಧವಾಗಬಲ್ಲರು.

೫. ಚೀನಾ ಕ್ಯಾತೆ ತೆಗೆಯದೆ ಇರುವ ನೆರೆ ರಾಷ್ಟ್ರಗಳು ತುಂಬಾ ಕಡಿಮೆ. ಭಾರತದಂತೆಯೇ ವಿಯೆಟ್ನಾಂ ಕೂಡ ಚೀನಾದ ಬದ್ದ ವೈರಿ. ಇದರೊಂದಿಗೆ ಭಾರತದ ಸಂಬಂದ ಸುಧಾರಿಸುತ್ತಿದೆ .  ಮೊನ್ನೆ ಭಾರತ ನೌಕಪದೆ ವಿಯೆಟ್ನಾಂಗೆ ಭೇಟಿ ಕೊಟ್ಟಾಗ - ಚೀನಾದ ಯುಧ ನೌಕೆಯೊಂದಿಗೆ ತಕರಾರು ನಡೆಯಿತು (ಇದು ನಮ್ಮನ್ನು ಹೆದರಿಸಲು ಚೀನಾ ನಡೆಸಿದ ಕುತಂತ್ರ).  ವಿಯೆಟ್ನಾಂ  ಏನೋ ಚೀನಾಗೆ ಚೆನ್ನಾಗಿ ಬೆದರಿಸಿತು, ಆದರೆ ನಮ್ಮ ಪುಕ್ಕಲು ವಿದೇಶಾಂಗ ಸಚಿವಾಲಯ ಏನು ದೊಡ್ಡ  ಘಟನೆ ನಡೆದೇ ಇಲ್ಲ ಎಂಬಂತೆ ಹೇಳಿಕೆ ಕೊಟ್ಟಿತು.

೬. ಚೀನಾ ನಮ್ಮ ಸುತ್ತಲು ಶತ್ರುಗಳನ್ನು ಎತ್ತಿ ಕಟ್ಟುತ್ತಿದೆ - ಪಾಕಿಸ್ತಾನ , ಬರ್ಮಾ.  ಶ್ರೀಲಂಕಾಗೆ ಸ್ನೇಹ ಹಸ್ತ ಚಾಚುತ್ತಿದೆ. ಮೊನ್ನೆ ಶ್ರೀಲಂಕಾದ ಪ್ರಧಾನಿ ಚೀನಾವನ್ನು ಹೊಗಳುತ್ತಿದರು. ಇತ್ತ  ಚೀನಾ ನಮ್ಮನ್ನು ಸುತ್ತುವರೆಯುತ್ತಿರಬೇಕಾದರೆ ಅತ್ತ ಅದರ ತೊಂದರೆ ಎದುರಿಸುತ್ತಿರುವ - ದಕ್ಷಿಣ ಕೊರಿಯ, ಜಪಾನ್ ನೊಂದಿಗೆ ಯಾವುದೇ ರಕ್ಷಣಾ ಒಪ್ಪಂದ ಮಾಡಿಕೊಂಡಿಲ್ಲ.  ಚೀನಾಗೆ ನಾವು ಹೆದರಿಕೊಂಡು - ತೈವಾನ್ ದೇಶವನ್ನು ಗುರುತಿಸಿಯೇ ಇಲ್ಲ.  ನಮ್ಮ ಪುಕ್ಕಳು ತನಕ್ಕೆ ಎಲ್ಲೇ ಇಲ್ಲ ಎನಿಸುತ್ತದೆ.

ನೇಪಾಳ:
ಇದು ಭಾರತದ ಉತ್ಯುತ್ತಮ ಸ್ನೇಹಿತವಾಗಿತ್ತು . ಅಲ್ಲಿನ ರಾಜರು ಭಾರತ ಪರವಾಗಿದ್ದರು. ಜಗತ್ತಿನ ಏಕೈಕ ಹಿಂದೂ ರಾಷ್ಟ್ರವಾಗಿತ್ತು.

ಅಲ್ಲಿನ ಕಮ್ಯುನಿಸ್ಟರು, ಚೀನಾದ ಸಹಾಯದೊಂದಿಗೆ  ದಂಗೆ ಎದ್ದು  ತಮ್ಮ ಸರಕಾರವನ್ನು ಸ್ಥಾಪಿಸಿಕೊಂಡಿದ್ದಾರೆ.  ಇವರುಗಳು ಭಾರತಕ್ಕೆ ಶತ್ರುಗಳಲ್ಲ್ದಿದ್ದರು ಚೀನಾಕ್ಕೆ ಹೆಚ್ಚು ಆಪ್ತ.  ಭಾರತ ನೇಪಾಳಕ್ಕೆ ಗುಪ್ತವಾಗಿಯೋ, ಬಹಿರಂಗವಾಗಿಯೂ ಸಹಾಯ ಕೊಟ್ಟು ಅಲ್ಲಿನ ಕಮ್ಯುನಿಸ್ಟರನ್ನು ದೂರ ಇಡುವುದು ಕಷ್ಟವಾಗುತ್ತಿರಲಿಲ್ಲ. (ಪಕ್ಕದಲ್ಲಿರು ಸಣ್ಣ ದೇಶಗಳಲ್ಲಿ ತಮ್ಮ ಸರಕಾರವನ್ನು ಸ್ಥಾಪಿಸುವ ಕೆಲಸವನ್ನು ಎಲ್ಲ ಶಕ್ತ ರಾಷ್ಟ್ರಗಳು ಮಾಡುತ್ತಿರುತ್ತವೆ ) ಇದು ನಮ್ಮ ವಿದೇಶಾಂಗ ನೀತಿಯ ದಿವಾಳಿತನ ತೋರಿಸುತ್ತದೆ.

ಬಾಂಗ್ಲಾದೇಶ:
ನಾವು ಇದಕ್ಕೆ ನಮ್ಮ ರಕ್ತ ನೀಡಿ ಸ್ವಾತಂತ್ಯ್ರ ಕೊಟ್ಟರು - ನಮಗೆ ಸಿಕ್ಕ ಗೌರವ ಅಷ್ಟಕಷ್ಟೇ.  ಇಸ್ಲಾಂ  ಮೂಲಭೋತವಾದ ಹೆಚ್ಚ್ಗಿದ್ದರು ನಮ್ಮ ಸರಕಾರ ಕಣ್ಣು ಮುಚ್ಚಿಕೊಂಡು ಬಿದ್ದಿದೆ.

ಅಲ್ಲಿನ ವಿರೋಧಿ ಪಕ್ಷ - ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ ಭಾರತ ವಿರೋಧಿ ದೋರಣೆ ಇದೆ. ಅದು ಅಧಿಕಾರಕ್ಕೆ ಬರದಿರುವಂತೆ ಮಾಡಲು ಭಾರತಕ್ಕೆ ಕಷ್ಟವೇನಲ್ಲ (ದುಡ್ಡು ಮತ್ತು ಗೂಡಾಚಾರಿಕೆ ಉಪಯೋಗಿಸಿ ). 

ಬಾಂಗ್ಲಾದೇಶದೊಂದಿಗೆ ಗಡಿ ಸಮಸ್ಯೆ ಬಗೆಹರಿಸಿಕೊಳ್ಳಲು ಅದರೊಂದಿಗೆ ಗಡಿ ಭಾಗದ ಭೂಮಿ ಬದಲಾವಣೆ ಮಾಡಲು ಒಪ್ಪಿದ್ದೇವೆ. ಇದರಲ್ಲಿ ಭಾರತ ಬಾಂಗ್ಲಾದೇಶಕ್ಕೆ 10,000 (ಹತ್ತು ಸಾವಿರ ) ಎಕರೆ ಹೆಚ್ಚಿಗೆ ಭೂಮಿಯನ್ನು ಕಡಲು ಒಪ್ಪಿದೆ . ಇದನ್ನು ನೋಡಿ ಏನನ್ನಬೇಕೂ ಗೊತ್ತಾಗುತ್ತಿಲ್ಲ

ಬರ್ಮಾ:
ಬರ್ಮದಲ್ಲಿ ಮಿಲಿಟರಿ ಆಡಳಿತ ಬಂದ ಮೇಲೆ, ಅದನ್ನು ವಿರೋಧಿಸಿ ಭಾರತ ಅದರೊಂದಿಗೆ ಸಂಬಂಧ ಕಡಿಮೆ ಮಾಡಿತು.
ಬರ್ಮದಲ್ಲಿ ಮಿಲಿಟರಿ ಆಡಳಿತ ಇದ್ದರೆ ನಮಗೆ ಏನಪ್ಪಾ ಆಗಬೇಕು, ನಮ್ಮ ಅವಶ್ಯಕತೆ ಮೊದಲು ನೋಡಬೇಕು ತಾನೇ ?  ಇಲ್ಲಿ ಚೀನಾಕ್ಕೆ ಒಂದು ಒಳ್ಳೆಯ ಅವಕಾಶ ದೊರೆಯಿತು.

ಆದರೆ 1990 ರ ದಶಕದಲ್ಲಿ ಭಾರತ ತನ್ನ ನಡುವಳಿಕೆಯನ್ನು ಬದಲಾಯಿಸಿ ಅದರೊಂದಿಗೆ ಸ್ನೇಹ ಮಾಡಿತು.  ಈಗ ಪರಿಸ್ಥಿತಿ  ಸುದಾರಿಸಿದೆ. ಮೊನ್ನೆ ಮೊನ್ನೆ ನಮ್ಮ ವಿದೇಶಾಂಗ ಸಚಿವರ ಒಂದು ಹೇಳಿಕೆ ಕೊಟ್ಟರು -" ಬರ್ಮಾದ ಜನರೇ ಅಲ್ಲಿನ ಪ್ರಜಾತಂತ್ರ ವ್ಯವಸ್ಥೆಗೆ ಹೋರಾಡಬೇಕು., ಭಾರತ ಮಧ್ಯೆ ಪ್ರವೇಶಿಸುವುದಿಲ್ಲ."

ಆದರೂ ಚೀನಿ ಪ್ರಭಾವ  ತಗ್ಗುವ ಲಕ್ಷಣಗಲಿಲ್ಲ.

ತ್ರಿನಿದಾದ್, ಫಿಜಿ, ಗುಯನ, ಮಾರಿಷಸ್:
ಇಲ್ಲೆಲ್ಲೇ ಭಾರತೀಯರು ಬಹುಸಂಖ್ಯೆಯಲ್ಲಿ ಇದ್ದಾರೆ. ಆದರೆ ಭಾರತ ಈ ದೇಶಗಳನ್ನು ನಮ್ಮೊಂದಿಗೆ ಯಾವುದೇ ರೀತಿಯಲ್ಲಿ ತೊಡಗಿಸಿ ಕೊಳ್ಳಲು ಯಾವುದೇ ಪ್ರಯತ್ನ ಮಾಡಿದಂತಿಲ್ಲ.

ಕೊನೆ ಹನಿ: ಇನ್ನೂ ಖಾಯಂ ಸದಸ್ಯತ್ವ ಬೇಕೆ?
ಭಾರತ ವಿಶ್ವ ಸಂಸ್ಥೆಯಲ್ಲಿ ಕಾಯಂ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದೆ.  ಆ ಸ್ಥಾನ ಇರುವುದು - ತಾಕತ್ತು ಇರುವವರಿಗೆ,  ಜಗತ್ತಿನಲ್ಲಿ ಬೇರೆ ದೇಶಗಳ ಮೇಲೆ ಪ್ರಭಾವ ಬೀರುವ ಶಕ್ತಿ ಇರುವವರಿಗೆ - ಜನ ಸಂಖ್ಯೆ ತೋರಿಸಿ ಗಳಿಸುವ ಸ್ಥಾನವಲ್ಲ.

Saturday, October 15, 2011

ಒಂದು ಶಿಶು ಗೀತೆ

ನಾನು ಮಗಳಿಗೆ ಬರೆದೆ ಗೀತೆ

ಜೋ ಜೋ ಬಂಗಾರಿ
ಮಲಗು ಮುದ್ದು ಸಿಂಗಾರಿ

ಹಾರು ಕುದುರೆ ಬೆನ್ನೇರಿ
ಆಡು ಕನಸಿನ್ ಲೋಕದಲ್ಲಿ

ಬಂದರೆ ಆಗ ಗುಮ್ಮ
ಅಡುಗು ನೀನು ಚಿನ್ನ

ನಗುತಾ ಇರು ರನ್ನ
ಮಲಗು ನೀನು ಚೆನ್ನ


 :-)

Saturday, September 10, 2011

ಧರ್ಮ, ನಾಸ್ತಿಕತೆ ಹಾಗೂ ಮನುಷ್ಯ

ಗೆಳೆಯರೇ,

ನೀವು ಮೇಲಿನ ಎರಡು ಪದಗಳನ್ನೂ, ಅದರ ಬಗ್ಗೆ ಹಲವಾರು ಚರ್ಚೆಗಳನ್ನು ಕೇಳಿರಬಹುದು.
ಇಲ್ಲಿ ನಾನು ಯಾವುದು ಸರಿ, ಯಾವುದು ತಪ್ಪು ಎಂಬ ವಾದವಿರುವುದಿಲ್ಲ;  ವಿಭಿನ್ನ ರೀತಿಯ ಚರ್ಚೆ.

ನನ್ನ ಅಭಿಪ್ರಾಯ: ಮನುಷ್ಯ ಅವನ "logic" ಅನುಸರಿಸಿ, ಸುಖವನ್ನು ಹುಡುಕಿಕೊಂಡು ಹೋಗುತ್ತಾನೆ.  ನಿಜ ಇಷ್ಟೇ  !!!

ಆಸ್ತಿಕತೆ ಬೇರೆ ಅಲ್ಲ, ನಾಸ್ತಿಕತೆ ಬೇರೆ ಅಲ್ಲ ; ವೈಜ್ಞಾನಿಕತೆ ಬೇರೆ ಅಲ್ಲ, ಧಾರ್ಮಿಕತೆ ಬೇರೆ ಅಲ್ಲ . ಇವೆಲ್ಲ ಸತ್ಯವನ್ನು ಹುಡುಕುವ ಬೇರೆ ಬೇರೆ ದಾರಿಗಳು. ಆ ಸತ್ಯ - ಮನುಷ್ಯನ ಉನ್ನತಿ.

ನೀವು ಯಾವುದೇ ಧಾರ್ಮಿಕ ಚಾನಲ್ ಗಳನ್ನು ನೋಡಿ - ಸಮಾಜದಲ್ಲಿ ಎಲ್ಲರೊಂದಿಗೆ ಸ್ನೇಹದಿಂದ ಇರಿ, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಿ,  ಒಟ್ಟಾಗಿ ಪ್ರಾರ್ಥನೆ (ಅಥವಾ ಸತ್ಸಂಗ) ಮಾಡಿ ಎನ್ನುತ್ತಾರೆ. (ಮೇಲಿನ ಎಲ್ಲದ್ದನ್ನು - ದೇವರು ಹೇಳಿದ್ದಾನೆ, ಬಯಸುತ್ತಾನೆ ಎನ್ನುತ್ತಾರೆ)

ಮನುಷ್ಯನು ಜೀವನದಲ್ಲಿ / ಕೆಲಸದಲ್ಲಿ ಮುಂದೆ ಬರಬೇಕಾದರೆ - ಜನರ ಸಂಪರ್ಕವಿರಬೇಕು.  ಆದಿಲ್ಲದೆ ಏನು ಸಾಧ್ಯವಿಲ್ಲ . ಹೊಸ ಕಂಪನಿ ತೆರೆಯಬೇಕಾದರೆ, ಒಂದು ಕಾರ್ಯಕ್ರಮ ಆಯೋಜಿಸಬೇಕಾದರೆ ಎಲ್ಲಕ್ಕೂ ಜನ ಬೇಕು. ರಾಜಕಾರಣಿಗಳನ್ನು ಕೇಳಿ; ಇದನ್ನು ಸರಿಯಾಗಿ ವಿವರಿಸುತ್ತಾರೆ.

ಇನ್ನೂ ಒಟ್ಟಿಗೆ ಕಡ್ಡಾಯ ಪ್ರಾರ್ಥನೆಯ ಮಾಡುವುದರ ಫಲ ಏನಪ್ಪಾ ? - ಅಲ್ಲಿ ಎಷ್ಟು ಜನರಿಗೆ ದೇವರು ಒಲಿದು ಮೋಕ್ಷ ಸಿಗುತ್ತದೋ ಗೊತ್ತಿಲ್ಲಾ, ಎಷ್ಟು ಜನರ ಆಸೆ ಈಡೇರುತ್ತೋ ತಿಳಿದಿಲ್ಲ; ಆದರೆ ಎಲ್ಲ ಜನರು ಅಲ್ಲಿ ಸೇರುವುದರಿಂದ ಅಲ್ಲಿ ಸಮಾಜ ಒಗಟ್ಟಗುತ್ತದೆ. ಇದರಿಂದ ಆ ಸಮಾಜದ ಎಲ್ಲರೂ ಅನುಕೂಲವಾಗುತ್ತದೆ, ಒಗ್ಗಟ್ಟಿನಿಂದ ಪ್ರತಿಕೂಲ ಸನ್ನಿವೇಶದಲ್ಲೂ ಬದುಕೂವ, ಬೆಳೆಯುವ ತಾಕತ್ತು ಬರುತ್ತದೆ  - ಕಡ್ಡಾಯ ಭಾನುವಾರದ ಚರ್ಚ್ ಮತ್ತು ಶುಕ್ರವಾರದ ನಾಮಜ್ ನಿಂದಾದ ಉಪಯೋಗ ಅವು ಜಗತ್ತಿನಲ್ಲೆಡೆ ಹರಡಿದೆ. ನಮ್ಮ ದೇಶದ ಜೈನರು/ಮಾರ್ವಾಡಿಗಳು ಕೂಡ (ಬೆಂಗಳೂರಿನಲ್ಲೇ )ಸಂಘಗಳನ್ನು ಕಟ್ಟಿಕೊಂಡಿದ್ದಾರೆ. ತಮ್ಮವರಿಗೆ ವ್ಯಾಪಾರ/ಉದ್ದಿಮೆ ಮಾಡುಲು ಪರಸ್ಪರ ಸಹಾಯ ಮಾಡುತ್ತಾರೆ ( ಇವತ್ತು SP ರೋಡ್ ನಲ್ಲಿ ಅವರ ವ್ಯಾಪಾರವನ್ನು ನೋಡಿ, ಒಂದು sample ತಿಳಿಯುತ್ತದೆ.)

ಒಮ್ಮೆ GOD ಚಾನಲ್ ನೋಡುತ್ತಾ ಇದ್ದೇ. ಅದರಲ್ಲಿ ಕುಡಿತವನ್ನು ಬಿಡಿ, ಡ್ರಗ್ಸ್ ಬಿಡಿ, ಸಿಗರೇಟು ಬಿಡಿ, ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಅಂತ ಲೆಕ್ಚರ್ ಕೊಡುತ್ತಾ ಇದ್ದ . ದೇವರ ಪ್ರೀತಿ ಬಗ್ಗೆ ನನಗೆ ಗೊತ್ತಿಲ್ಲ- ಆದರೆ ಆ ಕೆಟ್ಟ ಚಾಟಗಳನ್ನು ಬಿಟ್ಟರೆ ಅವರಿಗೆ ಒಳ್ಳೆಯದಲ್ಲವೇ (ಆರೋಗ್ಯಕ್ಕೆ ಹಾಗೂ ಜೇಬಿಗೆ ;-))

ಇನ್ನೂ ದಾನ/ ಬೇರೆಯವರಿಗೆ ಸಹಾಯ ಮಾಡಿ ಎನ್ನುತ್ತಾರೆ.  ನಿಮ್ಮಾನ್ನು ದೇವರು ಮೆಚ್ಚುತ್ತಾನೆ ಅಂತ ಆಸ್ತಿಕರು ಹೇಳುತ್ತಾರೆ. ಆದರೆ ಈ ನಡುವಳಿಕೆಗೆ ಕಾರಣವನ್ನು ವಿಜ್ಞಾನಿಗಳು ಹೀಗೆ ವಿವರಿಸುತ್ತಾರೆ: ನೀವು ಒಂದು ನಾಯಿಯನ್ನು ಪ್ರೀತಿಯಿಂದ ನಾಲ್ಕು ತುತ್ತು ಹಾಕಿದರೆ, ಅದು ನಿಮ್ಮನ್ನು ನೋಡಿಕೊಳ್ಳುವಿದಿಲ್ಲವೇ? (ಹಕ್ಕಿ ಎಮ್ಮೆಯ ತಲೆಯಿಂದ, ಹುಳ ತಿನ್ನುವುದರಿಂದ ಇಬ್ಬರಿಗೂ ಲಾಭವಿದೆ) ಹಾಗೆಯೇ ನಿಮಾಗೂ ಮುಂದೊಂದು ದಿನ ಸಹಾಯ  ಬೇಕಾದ ಸಮಯದಲ್ಲಿ ಸಿಗಬಹುದು.

ನೀವು ಯಾವುದೇ ಸ್ವಾಮೀಜಿಯ ಭಾಷಣವನ್ನೊ? ಧಾರ್ಮಿಕ ಲೇಖನವನ್ನೊ ನೋಡಿ - "ವಸುಧೈವ ಕುಟುಂಬಕಮ್" . ಎಲ್ಲರಲ್ಲೂ ಒಂದೇ ದೇವರ ಅಂಶವಿದೆ ಎನ್ನುತ್ತಾರೆ.  ನೀವು ಒಬ್ಬ "biologist"ನ ವಿಚಾರಿಸಿ ಅವನು ಹೇಳುತ್ತಾನೆ: ಪ್ರತಿಯೊಂದು ಜೀವಿಯಲ್ಲಿರುವುದು (ಮೀನು, ಪಕ್ಷಿಗಳು, ಪ್ರಾಣಿಗಳು) ಒಂದೇ ಮೂಲ ತತ್ವ - ಅದೇ "DNA", "RNA".
"RNA" ಕಂಡುಹಿಡಿದ ಹೇಳಿದ ನಂತರ ವಿಜ್ಞಾನಿ ಹೇಳಿದ್ದು ಇಷ್ಟೇ  - 'ನನ್ನ ಸಂಶೋಧನೆಯ ನಂತರ ಹೊರಗೆ ಬಂದೆ - ಪ್ರತಿಯೊಂದು ಜೀವಿ ಗುಬ್ಬಿ, ಮರ ಎಲ್ಲರಲ್ಲೂ ಒಂದೇ  ಅಂಶವನ್ನು ಕಾಣುತ್ತಿರುವೆ' ;-)

ಯಾವುದೇ ಧಾರ್ಮಿಕ ಗುರುಗಳು ಹೇಳುವ ಉಪದೇಶವನ್ನು ಕೇಳಿ - ಆ ಎಲ್ಲ ಉಪ್ದೇಶಗಳನ್ನು ಆದ್ಯತ್ಮಿಕತೆ ಇಲ್ಲದ ಹಾಗೆ ಜನರಿಗೆ ತಿಳಿಯುವ ಹಾಗೆ ಹೇಳಬಹುದು.  ಅತ್ಯಂತ ಪ್ರಸಿದ್ದವಿರುವ "DALE CARNIGE" ಅವರ "How to win friends and influence people" ಓದಿ. ಅಲ್ಲಿ ಧಾರ್ಮಿಕ ಪ್ರವಚನಗಳಲ್ಲಿ ಇರುವುದನ್ನೇ ಬಟ್ಟಿ ಇಳಿಸಿ, ಆಧ್ಯಾತ್ಮಿಕತೆ ತೆಗೆದು ಹೇಳಿದ್ದಾನೆ.

ಹೆಚ್ಚು ಕೊರೆಯಲಿಕ್ಕೆ ಹೋಗುವುದಿಲ್ಲ - ನಾನು ಶ್ರೀ ಶ್ರೀ ರವಿಶಂಕರ್ ಹಾಗೋ "Richard Dawkins" ಅವರ ವೀಡಿಯೋಗಳನ್ನು ನೋಡಿದ್ದೇನೆ. ಅದರ ಸಾರ ಇಷ್ಟೇ (ನನ್ನದೊಂದು ಹಳೆಯ ಪೋಸ್ಟ್ )

When Richard Dawkins talks, you notice that he emphasizes "importance and joy" of living in present moment and exploring the mystery of world. (also stressing dont think about god)

If you listen to Sri Sri Ravishankar, he too emphasizes importance and joy of being in present moment. (also stressing love of god)

Saturday, September 3, 2011

ಹಂಪೆಯಲ್ಲಿ ನಾನು ಕಲಿತ ಪಾಠ, ನನ್ನ ಆಲೋಚನೆಗಳು

ನಾನು ಹಂಪೆಯಿಂದ ಹಿಂತಿರುಗಿದರು, ಇನ್ನೂ ನನ್ನ ತಲೆಯಿಂದ ಹೋಗಿಲ್ಲ.  ನಮ್ಮ ಮನೆಯ ಸಮೀಪವಿರುವ ಹನುಮಂತನ ದೇವಸ್ಥಾನದ ಸುತ್ತಲೂ ಹಂಪೆಯ ವಿವಿಧ ಸ್ಮಾರಕಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಅದರಲ್ಲಿರುವ ಹಲವಾರು ಚಿತ್ರಗಳನ್ನು ನಾನು ಗುರುತಿಸಬಲ್ಲೆ. ಪತ್ರಿಕೆಯಲ್ಲೂ ಹಲವಾರು ಬಾರಿ ಹಂಪೆಯ ಬಗ್ಗೆ ಓದಿದ್ದೆ .

ಕಮಲಪುರದಲ್ಲಿ ನಾನು ಒಂದು ದೊಡ್ಡ ಬಂಗಲೆಯನ್ನು (ರಾಜಪುತ ಕೋಟೆ ಎಂಬ ಹೆಸರು) ನೋಡಿದ್ದೆ .  ಹಿಂತಿರುಗಿ ಬಂದ ಮೇಲೆ ಪತ್ರಿಕೆಯಲ್ಲಿ ಅದರ ಬಗ್ಗೆ ಒಂದು ಆರ್ಟಿಕಲ್ ಬಂದಿತ್ತು . MLA ಆನಂದ್ ಸಿಂಗ್ ಅವರ ತಮ್ಮ (ಅಥವಾ ಮೈದುನ ), ಅದನ್ನು ಕಟ್ಟಿಸಿದ್ದಂತೆ ....  ಹಂಪೆಗೆ ವಿಶ್ವ ಪರಂಪರೆ ಪಟ್ಟಿ ಕೊಡಬೇಕಾದರೆ - ಅಲ್ಲಿನ ಕಟ್ಟಡಗಳ, ಹಂಪೆಯ ಪರಿಸರದ ಯಥಾ ಸ್ಥಿತಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ನಿಯಮವಿದೆ.  ಅದನ್ನು ಉಲ್ಲಂಘಿಸಿ ಮಹಲನ್ನು ಕಟ್ಟಿದ್ದಾರೆ.  (ಎಲ್ಲಿಂದಲೋ ಮುಸ್ಲಮನರಿಗೆ ಹೆದರಿಕೊಂಡು ಓಡಿ ಬಂದವರಿಗೆ, ಈ ನಾಡಿನ ಪರಂಪರೆಯ ಮಹತ್ವ ಹೇಗೆ ತಿಳಿಯಬೇಕು ಎಂದುಕೊಂಡೆ ?  ಯೋಚನೇ ಮಾಡಿದಾಗ ಯಾವನೋ ಒಬ್ಬ ಮಾಡಿದ ತಪ್ಪಿಗೆ ಕರ್ನಾಟಕದಲ್ಲಿರುವ ಎಲ್ಲ ರಾಜಪುತರನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ ಅನ್ನಿಸಿತು)

ಹಂಪೆಗೆ ರೈಲಿನಲ್ಲಿ ಹೋಗುವಾಗ ದಾರಿಯಲ್ಲಿ  ಬೆಳಗ್ಗೆ ಆದ ಕೂಡಲೇ ಅದಿರಿನ ಕಾರ್ಖಾನೆಗಳು ಉಗುಳುತ್ತಿರುವ ಹೊಗೆ ನಿಮ್ಮನ್ನು ಸ್ವಾಗತಿಸುತ್ತವೆ. ಹಂಪೆಯಲ್ಲಿ ಹತ್ತಿರ ಹೆದ್ದಾರಿಗಳಲ್ಲಿ ಓಡಾಡಿದರೆ - ಅದಿರಿನ ಕೆಂಪಗಿನ ದೂಳು ನಿಮ್ಮನ್ನು ಅವರಿಸುತ್ತದೆ. ಇಷ್ಟು ಲೂಟಿ ಮಾಡುತ್ತಿರುವುದು ಆನಂದ್ ಸಿಂಗ್ ಅವರಿಗೆ ಸಾಕಾಗಲಿಲ್ಲ ಎನಿಸುತ್ತದೆ.  ಮೊನ್ನೆ ಪತ್ರಿಕೆಯಲ್ಲಿ ಅವರು ಹಂಪೆಯ ಸುತ್ತುಮುತ್ತಲು ಕಲ್ಲಿನ ಗಣಿಗಾರಿಕೆಗೆ ಅನುಮತಿ ಬೇಕೆಂದು - ಹೋರಾಟ ಮಾಡುವುದಾಗಿ ಬಂದಿತ್ತು .

ಈ ಸಿಂಗ್ ಕುಟುಂಬವನ್ನು ಎತ್ತಂಗಡಿ ಮಾಡದಿದ್ದರೆ, ಹಂಪೆಯ ಸ್ಮಾರಕಗಳಿಗೆ ಉಳಿಗಾಲವಿಲ್ಲ ಎನಿಸುತ್ತದೆ.

ಹಂಪೆಯಲ್ಲಿ ನಾನು ಓಡಾಡುವಾಗ, ವಿರೂಪಾಕ್ಷ ದೇವಾಲಯದ ಮುಂದಿರುವ ರಾಜ ಬಿದಿಯ ಎರಡು ಕಡೆಗಳಲ್ಲಿ ಬಹಳ ಹಳೆಯದಾದ ಕಲ್ಲಿನ ಮಂಟಪಗಳಿವೆ. ಅದರಲ್ಲಿ ಕೆಲವು ಅಂಗಡಿಗಳಿದ್ದರೆ, ಇನ್ನೂ ಕೆಲವು ಮನೆಗಳನ್ನು ಮಾಡಿಕೊಂಡಿದ್ದಾರೆ.
ಕೆಲವು ವಾರಗಳ ಹಿಂದೆ ಅವೆಲ್ಲವನ್ನು ಎತ್ತಂಗಡಿ ಮಾಡಿಸಿದಾಗ, ಅಲ್ಲಿ ಕೆಲವು ಪುರಾತನ ವಸ್ತುಗಳು ಸಿಕ್ಕಿದ್ದನ್ನು ಓದಿ ಖುಷಿಯಾಯಿತು.


ಹಂಪೆಯ ಪ್ರವಾಸ ಮಾಡುವಾಗ ಹಲವಾರು ಯೋಚನೆಗಳು ತಲೆಗೆ ಬಂದವು.  ಮೊದಮೊದಲು ಹಂಪೆಯ ದುಸ್ಥಿತಿಯನ್ನು ನೋಡಿ ಬಹಳ ಬೇಸರವಾಯಿತು. ಕೃಷ್ಣದೇವರಾಯನ ದೊಡ್ಡಸ್ತಿಕೆಯನ್ನು ನೋಡಿ ಚೆನ್ನಾಗಿ ಅವನ್ನು ಬೈದುಕೊಂಡೆ. ಅವನು ಎಲ್ಲ ಬಹಮನಿ ರಾಜ್ಯಗಳನ್ನು ಗೆದ್ದಿದ್ದರು ಸಹ, ಅವಗಳನ್ನು ಅವನಿಗೆ ಹಿಂತಿರುಗಿಸಿ "ಯವನ ರಾಜ್ಯ ಸಂಸ್ಥಾಪಕ" ಎಂಬ ಬಿರುದನ್ನು ಪಡೆದುಕೊಂಡಿದ್ದ. ಅಲ್ಲಿ ವಜ್ರಗಳನ್ನು ಸೇರಿನಲ್ಲಿ ಮಾರುತ್ತಿದ್ದರು ಎಂದ ರಸ್ತೆಯನ್ನು ನೋಡಿದೆವು ... ಇಡೀ ನಗರದಲ್ಲಿ ಕಾಣುವ ಅದ್ಭುತವಾದ ಕಲ್ಲಿನ ಕೆತ್ತನೆಗಳು, ಕಟ್ಟಡಗಳು ನೋಡಿದೆವು  .  ಹಂಪೆಯಲ್ಲಿ ನೀವು ಎಲ್ಲೆ ನೋಡಿದರೂ ಹಾಳಾದ ದೇವಾಲಯವು ಕಾಣುತ್ತದೆ.

ನೀವು ಹಂಪೆಯನ್ನು ನೋಡಿದ ಯಾರನ್ನಾದರೂ ಕೇಳಿ, ಅದರ ಗತ ವೈಭವನ್ನು ನೆನೆಸಿಕೊಂಡು ಬೇಸರಪಡುತ್ತಾರೆ.  ನನಗೆ ಅನ್ನಿಸಿದ್ದು - ನಾವು ಇನ್ನೂ ಎಷ್ಟು ದಿವಸ ಗತ ವೈಭವವನ್ನು ನೆನೆಸಿಕೊಂಡು ಕೊರಗುವುದು ? ಕೊರಗಿದಷ್ಟೂ "ಡಿಪ್ರೆಷನ್" ಗೆ ಜಾರುತ್ತೇವೆ ಹೊರತು, ಉದ್ದರವಾಗುವುದಿಲ್ಲ. ಮತ್ತೆ ಅಂತಹ ರಾಷ್ಟ್ರ ಕಟ್ಟಲು ಕನ್ನಡಿಗರಿಗೆ ಸದ್ಯವಿಲ್ಲವೇ ? ಸಾಮರ್ಥ್ಯವಿಲ್ಲವೇ?  ಇಲ್ಲ ಖಂಡಿತ ಅದು ಸಾದ್ಯವಿದೆ. ಸಾಮರ್ಥ್ಯವಿದೆ . ಭಾರತದಲ್ಲಷ್ಟೆ ಅಲ್ಲ ವಿದೇಶದಲ್ಲೂ ಕನ್ನಡಿಗರೂ ಹೆಸರು ಮಾಡಿದ್ದರೆ, ಆದರೆ ಇಂದು ಕೊರತೆಯಿರುವುದು ಅವರಲ್ಲಿ ಕನ್ನಡದ ಅಭಿಮಾನ :(.

ಹಂಪೆ ದ್ವಾಪರದಲ್ಲಿ ಸಾಕ್ಷಾತ್ ಹನುಮನಿದ್ದ ಸ್ಥಳ. ಅವನು ಶಕ್ತಿಯ ಪ್ರತೀಕ. ಹಂಪೆಯಲ್ಲಿ ಎಲ್ಲೆಲ್ಲಿ ನೋಡಿದರೂ ನಿಮಗೆ ಅದ್ಭುತ ದೇವಲಯಗಳು ಕಾಣುತ್ತವೆ. ಆದರೆ ಮುಸ್ಸಲ್ಮಾನ ಸೈನ್ಯ ಬರುವಾಗ ಎಲ್ಲ ದೇವರು, ದೇವಾಲಯಗಳನ್ನು ಬಿಟ್ಟು (ಸಂಪತ್ತನ್ನು ಮಾತ್ರ ತೆಗೆಕೊಂಡು) ತಿರುಮಲರಾಯ ಓಡಿಹೋದ. ಜನರೂ ಓಡಿ ಹೋದರೂ.  ಅಷ್ಟು ಪೂಜೆ ಮಾಡಿದರೂ, ಹಂಪೆಯ ರಕ್ಷಣೆ ಆಗಲಿಲ್ಲ. ಒಂದಂತು ನನಗೆ ಸ್ಪಷ್ಟವಾಯಿತು. ನಿಜವಾದ ಶಕ್ತಿಯಿರುವುದು ಮನುಷ್ಯನ ಸಾಮರ್ಥ್ಯದಲ್ಲಿ, ಪ್ರಯತ್ನದಲ್ಲಿ - ದೇವರಲ್ಲಿ, ವಿಗ್ರಹಗಳಲ್ಲಿ ಅಲ್ಲ.  ದೈವ ಶಕ್ತಿಯಿದ್ದರೂ ಸಹ ಅದು ಮನುಷ್ಯ ಪ್ರಯತ್ನದಲ್ಲಿ ವ್ಯಕ್ತವಾಗಬೇಕು ಹಾಗೂ ವ್ಯಕ್ತವಾಗುತ್ತದೆ ಕೂಡ. ಹರಕೆಯಿಂದ, ಬೇಡುವುದರಿಂದ,  ಸುತ್ತುವುದರಿಂದ, ಶಾಸ್ತ್ರ ಕೇಳುವುದರಿಂದ , ಭವಿಷ್ಯ ನೋಡುವುದರಿಂದ, ಹೆಸರು ಬದಲಾಯಿಸುವುದರಿಂದ  ಏನೂ ಸದ್ಯವಿಲ್ಲ.

ಇಲ್ಲಿಗೆ ನನ್ನ ಹಂಪೆಯ ಪುರಾಣ ಮುಕ್ತಾಯ  :)